ಮಹಾರಾಷ್ಟ್ರ :ಈಗಾಗಲೇ ಕೊರೊನಾ 2ನೇ ಅಲೆಯ ಭೀಕರತೆಗೆ ತತ್ತರಿಸಿರುವ ದೇಶ ಇದೀಗ ಮತ್ತೊಂದು ಭಯಾನಕ ರೂಪಾಂತರಿ ಡೆಲ್ಟಾ ವೈರಸ್ಗೆ ಬೆಚ್ಚಿ ಬಿದ್ದಿದೆ. ಈ ನಡುವೆ ರೂಪಾಂತರಿ ವೈರಾಣುವಿನ 21 ಪ್ರಕರಣ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾಹಿತಿ ನೀಡಿದ್ದು, ರತ್ನಗಿರಿಯಲ್ಲಿ 9 ಪ್ರಕರಣ ಪತ್ತೆಯಾಗಿವೆ. ಜಲ್ಗಾಂವ್ನಲ್ಲಿ 7, ಮುಂಬೈನಲ್ಲಿ 2, ಪಾಲ್ಘರ್ ಹಾಗೂ ಥಾಣೆ, ಸಿಂಧೂದುರ್ಗ್ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ವರದಿಯಾಗಿವೆ ಎಂದು ತಿಳಿಸಿದ್ದಾರೆ.