ಕರ್ನಾಟಕ

karnataka

ETV Bharat / bharat

ಮಹಾದೇವ್ ಆ್ಯಪ್ ಸೇರಿ 21 ಬೆಟ್ಟಿಂಗ್ ಆ್ಯಪ್ ಬ್ಯಾನ್ - ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಸಿಂಡಿಕೇಟ್

ಮಹಾದೇವ ಆ್ಯಪ್ ಸೇರಿ 21 ಆನ್​ಲೈನ್ ಬೆಟ್ಟಿಂಗ್ ಆ್ಯಪ್​ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.

Mahadev APP, 21 online betting apps banned amid ED's money laundering probe
Mahadev APP, 21 online betting apps banned amid ED's money laundering probe

By ETV Bharat Karnataka Team

Published : Nov 6, 2023, 4:17 PM IST

ನವದೆಹಲಿ:ಅಕ್ರಮ ಬೆಟ್ಟಿಂಗ್ ಆ್ಯಪ್ ಮಹಾದೇವ್ ಆನ್ಲೈನ್ ಬುಕ್ ಹಾಗೂ ಇತರ 21 ಸಾಫ್ಟ್​ವೇರ್ ಮತ್ತು ವೆಬ್​ಸೈಟ್​ಗಳನ್ನು ನಿಷೇಧಿಸಿ ಭಾನುವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಹಾದೇವ್ ಬುಕ್ ಮತ್ತು ರೆಡ್ಡಿಯಣ್ಣ ಪ್ರೆಸ್ಟೋಪ್ರೋ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್​ಗಳು ಮತ್ತು ವೆಬ್​ಸೈಟ್​ಗಳ ವಿರುದ್ಧ ನಿರ್ಬಂಧ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಹೇಳಿಕೆಯಲ್ಲಿ ತಿಳಿಸಿದೆ.

ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಸಿಂಡಿಕೇಟ್ ವಿರುದ್ಧ ಇಡಿ ನಡೆಸಿದ ತನಿಖೆ ಮತ್ತು ನಂತರ ಛತ್ತೀಸಗಢದ ಮಹಾದೇವ್ ಬುಕ್ ಮೇಲೆ ನಡೆಸಲಾದ ದಾಳಿಗಳ ಸಮಯದಲ್ಲಿ ಅಪ್ಲಿಕೇಶನ್​ ಕಾನೂನುಬಾಹಿರ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ ಎಂದು ಅದು ಹೇಳಿದೆ. ಛತ್ತೀಸಗಢ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿರುವ ಆರೋಪಿ ಭೀಮ್ ಸಿಂಗ್ ಯಾದವ್ ಮತ್ತು ಅಸಿಮ್ ದಾಸ್ ಅವರನ್ನು ಪ್ರಸ್ತುತ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್​ಗಳ ಅಡಿ ಬಂಧಿಸಲಾಗಿದೆ.

ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿ ವೆಬ್​ಸೈಟ್ ಅಥವಾ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವಂತೆ ಶಿಫಾರಸು ಮಾಡಲು ಛತ್ತೀಸಗಢ ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ. ಆದಾಗ್ಯೂ, ಸರ್ಕಾರ ಹಾಗೆ ಮಾಡಲಿಲ್ಲ ಮತ್ತು ಕಳೆದ ಒಂದೂವರೆ ವರ್ಷಗಳಿಂದ ತನಿಖೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಅಂತಹ ಯಾವುದೇ ವಿನಂತಿ ಮಾಡಿಲ್ಲ. ವಾಸ್ತವವಾಗಿ, ಇಡಿಯಿಂದ ಮೊದಲ ಮತ್ತು ಏಕೈಕ ವಿನಂತಿ ಸ್ವೀಕರಿಸಲಾಗಿದೆ ಮತ್ತು ಅದನ್ನು ಕಾರ್ಯಗತಗೊಳಿಸಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಛತ್ತೀಸ್​​​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಯುಎಇಯಲ್ಲಿ ವ್ಯವಹಾರ ಆರಂಭಿಸುವಂತೆ ನನಗೆ ಸೂಚಿಸಿದ್ದಾರೆ ಎಂದು ಮಹಾದೇವ್ ಆ್ಯಪ್ ಪ್ರಕರಣದ ಆರೋಪಿಯೊಬ್ಬರು ಹೇಳಿಕೆ ನೀಡಿದ ಒಂದು ದಿನದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ. ಭಿಲಾಯ್​ನಲ್ಲಿ ತಮ್ಮ ಸಹಚರರನ್ನು ಬಂಧಿಸಿದ ಪ್ರಕರಣದಲ್ಲಿ ಸಹಾಯ ಕೇಳಿ ಛತ್ತೀಸ್​​ಗಢ ಸಿಎಂ ಭೂಪೇಶ್ ಬಘೇಲ್ ಅವರ ಬಳಿಗೆ ಹೋದಾಗ, ದುಬೈನಲ್ಲಿ ಬೆಟ್ಟಿಂಗ್ ವ್ಯವಹಾರ ಆರಂಭಿಸುವಂತೆ ಅವರು ನನಗೆ ಹೇಳಿದರು ಎಂದು ಮಹಾದೇವ್ ಆ್ಯಪ್ ಬೆಟ್ಟಿಂಗ್ ಪ್ರಕರಣದ ಪ್ರಮುಖ ಆರೋಪಿ ಶುಭಂ ಸೋನಿ ಹೇಳಿದ್ದನು.

ಈ ಆರೋಪಗಳನ್ನು ಮಾಡುವ ಮೊದಲು ಮಾತನಾಡಿದ್ದ ಆರೋಪಿ ಸೋನಿ, ತಾನು ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕನಾಗಿದ್ದು, 2021 ರಲ್ಲಿ ಇದನ್ನು ಆರಂಭಿಸಲಾಗಿದೆ ಮತ್ತು ನನ್ನ ಮಾಲೀಕತ್ವ ಸಾಬೀತುಪಡಿಸುವ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದ್ದ.

ಇದನ್ನೂ ಓದಿ : 20 ವರ್ಷ ಹಿಂದಿನ ಕೊಲೆ ಪ್ರಕರಣ; 6 ಜನರಿಗೆ 10 ವರ್ಷ ಜೈಲು ಶಿಕ್ಷೆ

ABOUT THE AUTHOR

...view details