ಕರ್ನಾಟಕ

karnataka

ETV Bharat / bharat

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​ ಪತ್ತೆ.. 40 ಮಂದಿ ಸಾವು - ಕೊರೊನಾ ವಿರುದ್ಧ ಭಾರತ ಹೋರಾಟ

India COVID update.. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Nationwide Vaccination Drive, Daily corona positivity rate, currently corona Recovery Rate, India fight against Corona, India corona update, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್, ದೈನಂದಿನ ಕೊರೊನಾ ಪಾಸಿಟಿವಿಟಿ ದರ, ಪ್ರಸ್ತುತ ಕೊರೊನಾ ಚೇತರಿಕೆ ದರ, ಕೊರೊನಾ ವಿರುದ್ಧ ಭಾರತ ಹೋರಾಟ, ಭಾರತ ಕೊರೊನಾ ಅಪ್​ಡೇಟ್​,
ಕೊರೊನಾ ಪ್ರಕರಣಗಳು ಪತ್ತೆ

By

Published : Apr 20, 2022, 10:53 AM IST

ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,067 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ದೈನಂದಿನ ಪಾಸಿಟಿವಿ ದರ ಶೇ. 0.49ರಷ್ಟು ಹೆಚ್ಚಾಗಿದ್ದು, ಸಾಪ್ತಾಹಿಕ ಪಾಸಿಟಿವಿ ದರ ಶೇ.38ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಓದಿ:India Corona: ದೇಶದಲ್ಲಿ ಹೊಸದಾಗಿ 796 ಸೋಂಕಿತರು ಪತ್ತೆ, 19ಸಾವು

ಮಂಗಳವಾರ 2,067 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಿನ್ನೆ ಒಂದೇ ದಿನ 40 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಷ್ಟ್ರೀಯ ಕೋವಿಡ್​​ ಚೇತರಿಕೆ ದರ ಶೇ.98.76 ರಷ್ಟಿದೆ.

ಓದಿ:ಭಾರತದಲ್ಲಿ ಹೊಸದಾಗಿ 949 ಮಂದಿಗೆ ಸೋಂಕು, ಆರು ಮಂದಿ ಮೃತ

ದೇಶದಲ್ಲಿ 12,340 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,547 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,25,13,248 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರೆದಿದ್ದು, ಇದುವರೆಗೆ ರಾಷ್ಟ್ರವ್ಯಾಪಿ ಒಟ್ಟು 186.90 ಕೋಟಿ ವ್ಯಾಕ್ಸಿನ್​ ಡೋಸ್​ ನೀಡಲಾಗಿದೆ.

ABOUT THE AUTHOR

...view details