ಹೈದರಾಬಾದ್: 2021ನೇ ಸಾಲಿನ ಮೆಡಿಸಿನ್ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಡೇವಿಡ್ ಜೂಲಿಯನ್ ಸಹಾಗೂ ಆರ್ಡೆಮ್ ಪಟಪೌಟಿಯನ್ಗೆ ಜಂಟಿಯಾಗಿ ಈ ಪ್ರಶಸ್ತಿ ಪ್ರಕಟಗೊಂಡಿದೆ.
ಅಮೆರಿಕದ ವಿಜ್ಞಾನಿಗಳಾಗಿರುವ ಡೇವಿಡ್ ಜೂಲಿಯಸ್ & ಆರ್ಡೆಮ್ ಪಟಪೌಟಿಯನ್ ಅವರಿಗೆ ತಾಪಮಾನ ಮತ್ತು ಸ್ಪರ್ಶಕ್ಕಾಗಿ ಗ್ರಾಹಕಗಳ ಸಂಶೋಧನೆ(receptors for temperature and touch)ಗಾಗಿ ಈ ಪ್ರಶಸ್ತಿ ಲಭಿಸಿದೆ.
ದೈನಂದಿನ ಜೀವನದಲ್ಲಿ ತಾಪಮಾನ ಹಾಗೂ ಒತ್ತಡವನ್ನ ಗ್ರಹಿಸಲು ನರ ಪ್ರಚೋದನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಈ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಜೂಲಿಯಸ್ ಮತ್ತು ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನೆಯ ಪ್ರಾಧ್ಯಾಪಕರಾದ ಪಟಾಪೌಟಿಯನ್ ಅವರು ಇದೀಗ 10 ಮಿಲಿಯನ್ ಸ್ವೀಡಿಸ್ ಕ್ರೋನರ್ ಪ್ರಶಸ್ತಿ ಚೆಕ್ ಪಡೆದುಕೊಳ್ಳಲಿದ್ದಾರೆ.
ಕಳೆದ ವರ್ಷ ಹೆಪಟೈಟಿಸ್ ಸಿ ವೈರಸ್ ಪತ್ತೆಗಾಗಿ ಮೂವರು ವೈರಾಲಜಿಸ್ಟ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.