ನವದೆಹಲಿ:ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಮಹಿಳೆಯನ್ನು ಕೊಂದ ಆರೋಪದ ಮೇಲೆ 2018ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪಂಜಾಬಿನ ಬಟ್ಟರ್ ಕಲಾಲ್ನ ರಾಜ್ವಿಂದರ್ ಸಿಂಗ್ (38) ಎಂದು ಗುರುತಿಸಲಾಗಿದ್ದು, ಕ್ವೀನ್ಸ್‌ಲ್ಯಾಂಡ್‌ನ ಇನ್ನಿಸ್‌ಫೈಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿಯೂ ಆಸ್ಟ್ರೇಲಿಯಾ ಪೊಲೀಸರು ಘೋಷಿಸಿದ್ದರು.
ಪ್ರಕರಣದ ಹಿನ್ನೆಲೆ: 2018 ರ ಅ.21ರಂದು ಟೊಯಾಹ್ ಕಾರ್ಡಿಂಗ್ಲೆ (24) ತನ್ನ ನಾಯಿಯನ್ನು ಕ್ವೀನ್ಸ್‌ಲ್ಯಾಂಡ್‌ನ ಕೈರ್ನ್ಸ್‌ನಿಂದ 40 ಕಿಮೀ ಉತ್ತರಕ್ಕೆ ವಾಂಗೆಟ್ಟಿ ಬೀಚ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಿಂಗ್ ಆಕೆಯನ್ನು ಕೊಂದಿದ್ದ. ಬಳಿಕ ಎರಡು ದಿನಗಳ ನಂತರ ಹೆಂಡತಿ ಮಕ್ಕಳನ್ನು ಬಿಟ್ಟು, ಪರಾರಿಯಾಗಿದ್ದ.
ಆಸ್ಟ್ರೇಲಿಯನ್ ಪೊಲೀಸರ ಪ್ರಕಾರ, ಕಾರ್ಡಿಂಗ್ಲಿ ಹತ್ಯೆಯಾದ ಮರುದಿನ ಸಿಂಗ್ ಕೇರ್ನ್ಸ್‌ನಿಂದ ಹೊರಟು, ಅ.23 ರಂದು ಸಿಡ್ನಿಯಿಂದ ಭಾರತಕ್ಕೆ ಹಾರಿದ್ದ. ಸಿಂಗ್ ಆಗಮನವನ್ನು ಭಾರತದ ಅಧಿಕಾರಿಗಳು ಖಚಿತಪಡಿಸಿದ್ದರು. ಮಾರ್ಚ್ 2021ರಲ್ಲಿ ಸಿಂಗ್ ಅವರನ್ನು ಕಳುಹಿಕೊಡುವಂತೆ ಆಸ್ಟ್ರೇಲಿಯಾವು ಭಾರತಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ಭಾರತವು ನವೆಂಬರ್ 2 ರಂದು ಅನುಮೋದಿಸಿತ್ತು. ಅದರಂತೆ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:10 ವರ್ಷದ ಮಗು ಕೊಂದು ರಕ್ತ ಕುಡಿದು ಅಮಾನವೀಯತೆ; ಮಹಿಳೆಗೆ ಜೀವಾವಧಿ ಶಿಕ್ಷೆ