ಹೈದರಾಬಾದ್:2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ(UPSC)ದ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಒಟ್ಟು 761 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, 545 ಪುರುಷರು ಹಾಗೂ 216 ಮಹಿಳೆಯರಿದ್ದಾರೆ. ಬಿಹಾರದ 24 ವರ್ಷದ ಶುಭಂ ಕುಮಾರ್ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು, ಇದರ ಜೊತೆಗೆ 2016ರ ಬ್ಯಾಚ್ನ ಟಾಪರ್ ಟೀನಾ ಡಾಬಿ ಸಹೋದರಿ ಕೂಡ ಪಾಸ್ ಆಗಿದ್ದಾರೆ.
ಟೀನಾ ಡಾಬಿ ಸಹೋದರಿಯಾಗಿರುವ ರಿಯಾ ಡಾಬಿ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟೀನಾ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ತಂಗಿ ರಿಯಾ ಡಾಬಿ ಯುಪಿಎಸ್ಸಿ 2020ನೇ ಸಾಲಿನ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದುಕೊಂಡಿರುವ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತದೆ ಎಂದಿದ್ದಾರೆ.