ನವದೆಹಲಿ:2000 ಮುಖಬೆಲೆಯ ನೋಟುಗಳ ವಿನಿಮಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ. ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ 2000 ರೂ. ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.
ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ.ಮುಖಬೆಲೆಯ ನೋಟುಗಳಿಗೆ ಬ್ಯಾಂಕ್ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ. ಯಾರೂ ಕೂಡ ಪ್ಯಾನಿಕ್ ಆಗಬಾರದು. ಈ ನೋಟುಗಳ ವಿನಿಮಯಕ್ಕೆ ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಆರ್ಬಿಐನಿಂದ ಮಹತ್ವದ ನಿರ್ಧಾರ:ಆರ್‌ಬಿಐ ಮಹತ್ವದ ನಿರ್ಧಾರಯೊಂದನ್ನು ತೆಗೆದುಕೊಂಡಿದೆ. 2,000 ರೂ. ಮುಖಬೆಲೆಯ ನೋಟ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂತೆಗೆದುಕೊಂಡಿದೆ. ಆದರೆ, 2,000 ರೂ. ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30ರೊಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000 ರೂ. ನೋಟುಗಳು ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಹೊರಡಿಸಿರುವ ಸುತ್ತೋಲೆಯಲ್ಲಿ ದೃಢಪಡಿಸಿದೆ. ಹೀಗಾಗಿ ಯಾರ ಬಳಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಗ್ರಹವಿದೆಯೋ ಅಂತಹವರು ತಕ್ಷಣ ಬ್ಯಾಂಕ್‌ಗಳಿಗೆ ಜಮೆ ಮಾಡುವಂತೆ ಆರ್‌ಬಿಐ ಕೋರಿಕೊಂಡಿದೆ.
20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಅನುಮತಿ:ಕಾರ್ಯಾಚರಣೆಯ ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಲ್ಲಿ ಅಡಚಣೆಯನ್ನು ತಪ್ಪಿಸಲು, ಆರ್‌ಬಿಐ 2000 ರೂ. ನೋಟುಗಳನ್ನು ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ 20,000 ರೂ.ವರೆಗೆ ಎರಡು ಸಾವಿರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.