ನವ ದೆಹಲಿ:2018-19ರ ಆರಂಭದಲ್ಲಿ 2,000 ರೂ ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಯಾವುದೇ ಹೊಸ ಇಂಡೆಂಟ್ ಅನ್ನು ಮುದ್ರಣಾಲಯಕ್ಕೆ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಕೆಲವೊಂದು ಮುಖಬೆಲೆಯ ಬ್ಯಾಂಕ್ ನೋಟುಗಳ ಉತ್ಪಾದನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆ ಸೇರಿ ಸರ್ಕಾರ ನಿರ್ಧರಿಸುತ್ತದೆ. 2019-20, 2020-21, ಮತ್ತು 2021-22ರಲ್ಲಿ 2 ಸಾವಿರ ರೂ ಮುಖಬೆಲೆಯ ಕರೆನ್ಸಿ ನೋಟುಗಳ ಮುದ್ರಣದ ಬಗ್ಗೆ ಮಾಹಿತಿ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿದರು.
2000 ರೂಪಾಯಿ ನೋಟು ಮುದ್ರಣ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ - ಆರ್ಥಿಕ ವರ್ಷದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ
ದೇಶದಲ್ಲಿ ಚಲಾವಣೆಯಾಗುತ್ತಿರುವ ನಕಲಿ ನೋಟುಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೇ ಎಂಬ ಪ್ರಶ್ನೆಗೆ ಸಚಿವರು ರಾಜ್ಯಸಭೆಯಲ್ಲಿ ಉತ್ತರಿಸಿದರು.
![2000 ರೂಪಾಯಿ ನೋಟು ಮುದ್ರಣ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ 2000 ರೂ. ನೋಟು ಮುದ್ರಣ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ](https://etvbharatimages.akamaized.net/etvbharat/prod-images/768-512-17203310-593-17203310-1671015204386.jpg)
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಕೇಂದ್ರ ಸಂಸ್ಥೆಯಾಗಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗುವ ನಕಲಿ ಕರೆನ್ಸಿ ನೋಟುಗಳ ಪ್ರಕರಣಗಳನ್ನು ಒಳಗೊಂಡಂತೆ ಅಪರಾಧಗಳ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಅದನ್ನು ತನ್ನ ವಾರ್ಷಿಕ ಆವೃತ್ತಿ 'ಕ್ರೈಮ್ ಇನ್ ಇಂಡಿಯಾ'ದಲ್ಲಿ ಪ್ರಕಟಿಸುತ್ತದೆ. ದೊಡ್ಡ ಮೊತ್ತದ ನಗದನ್ನು ನಿರ್ವಹಿಸುವ ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳ ಉದ್ಯೋಗಿಗಳು/ಅಧಿಕಾರಿಗಳಿಗೆ ನಕಲಿ ನೋಟುಗಳನ್ನು ಗುರುತಿಸುವ ಕುರಿತು ಆರ್‌ಬಿಐ ನಿಯಮಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ದೇಶದಲ್ಲಿ ಡಿಜಿಟಲ್ ಯುಗಾರಂಭ.. ಇಂಟರ್ನೆಟ್, ಶುಲ್ಕ ರಹಿತ ಇ -ರುಪಿ ವಹಿವಾಟು