ಕರ್ನಾಟಕ

karnataka

ETV Bharat / bharat

ಪೆರೋಲ್​ ಮೇಲೆ ಹೋದ 2,000ಕ್ಕೂ ಹೆಚ್ಚು ಕೈದಿಗಳು ನಾಪತ್ತೆ: ಪಂಜಾಬ್​ ಸರ್ಕಾರಕ್ಕೆ ದೊಡ್ಡ ತಲೆ ಬಿಸಿ - Punjab government is taking several steps to maintain law and order in the state

ಎನ್‌ಡಿಪಿಎಸ್ ಪ್ರಕರಣಗಳಲ್ಲಿ 2,000 ಕ್ಕೂ ಹೆಚ್ಚು ಕೈದಿಗಳು ಪಂಜಾಬ್ ಪೊಲೀಸರ ವಶದಲ್ಲಿಲ್ಲ ಎಂದು ತಿಳಿದು ಬಂದಿದೆ. ಪಂಜಾಬ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ.

ಪೆರೋಲ್​ ಮೇಲೆ ಹೋದ 2,000 ಕ್ಕೂ ಹೆಚ್ಚು ಕೈದಿಗಳು ನಾಪತ್ತೆ
ಪೆರೋಲ್​ ಮೇಲೆ ಹೋದ 2,000 ಕ್ಕೂ ಹೆಚ್ಚು ಕೈದಿಗಳು ನಾಪತ್ತೆ

By

Published : May 27, 2022, 6:55 PM IST

ಚಂಡೀಗಢ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಂಜಾಬ್ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಿದ್ದರೂ ರಾಜ್ಯದಲ್ಲಿ ಹಲವು ಅಹಿತಕರ ಘಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಎನ್‌ಡಿಪಿಎಸ್ ಪ್ರಕರಣಗಳಲ್ಲಿ 2,000 ಕ್ಕೂ ಹೆಚ್ಚು ಕೈದಿಗಳು ಪಂಜಾಬ್ ಪೊಲೀಸರ ವಶದಲ್ಲಿಲ್ಲ ಎಂದು ತಿಳಿದು ಬಂದಿದೆ. ಪಂಜಾಬ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ.

ಸರ್ಕಾರ ಸಲ್ಲಿಸಿರುವ ವರದಿಯ ಪ್ರಕಾರ ಈ 2,000 ಕೈದಿಗಳು ಪೆರೋಲ್ ಮೇಲೆ ತೆರಳಿದ್ದರು. ಆದರೆ, ಇನ್ನೂ ವಾಪಸ್ ಬಂದಿಲ್ಲ. ಇವರೆಲ್ಲ ಪರಾರಿಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಇಲ್ಲಿಯವರೆಗೆ ಅವರು ಪಂಜಾಬ್ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಸಂಬಂಧ ಪಂಜಾಬ್ ಸರ್ಕಾರದ ಅಡ್ವೊಕೇಟ್ ಜನರಲ್ ಅನ್ಮೋಲ್ ರತನ್ ಸಿಧು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇದರಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. 2020ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ಹಲವು ಪ್ರಕರಣಗಳು ಬಾಕಿ ಇವೆ ಎಂದು ಹೇಳಿದರು.

ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಎಷ್ಟು ಅಪರಾಧಿಗಳು ಪೆರೋಲ್‌ನಲ್ಲಿ ಹೊರಗೆ ಹೋದರು ಎಂಬ ಬಗ್ಗೆ ಸುಪ್ರೀಂಕೋರ್ಟ್ ಪಂಜಾಬ್ ಸರ್ಕಾರದಿಂದ ಉತ್ತರವನ್ನು ಕೇಳಿತ್ತು. ಇದರ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಹತ್ಯೆ: ಇಬ್ಬರು ಆರೋಪಿಗಳು ಅರೆಸ್ಟ್​

For All Latest Updates

TAGGED:

ABOUT THE AUTHOR

...view details