ಹೈದರಾಬಾದ್(ತೆಲಂಗಾಣ): ''ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಲವು ಪಟ್ಟು ಲಾಭ ಸಿಗುತ್ತದೆ'' ಎಂದು ಹೇಳಿ ಅಮಾಯಕರನ್ನು ವಂಚಿಸಿದ ಪ್ರಕರಣ ಹೈದಾರಬಾದ್ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಈ ವಂಚಕರು ‘‘ಮ್ಯಾಕ್ಸ್ ಕ್ರಿಪ್ಟೋ ಟ್ರೇಡಿಂಗ್ ಕಂಪನಿ’’ ಹೆಸರಿನಲ್ಲಿ ಹೈದರಾಬಾದ್ನ ಹಳೆ ಪಟ್ಟಣ ಹಾಗೂ ಉಪನಗರಗಳಲ್ಲಿ ಸ್ಥಳೀಯ ಮುಖಂಡರ ನೆರವಿನಿಂದ ಕಚೇರಿಗಳನ್ನು ತೆರೆದು ಆನ್‌ಲೈನ್ ಹೂಡಿಕೆ ಮಾಡಿದರೆ 150 ದಿನಗಳಲ್ಲಿ 30 ಪಟ್ಟು ಲಾಭ ಎಂದು ಪ್ರಚಾರ ಮಾಡಿದ್ದಾರೆ.
ತಮ್ಮ ಪ್ರಧಾನ ಕಚೇರಿ ದುಬೈನಲ್ಲಿದೆ ಮತ್ತು ಅಂತಾರಾಷ್ಟ್ರೀಯವಾಗಿ ಕ್ರಿಪ್ಟೋ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ ಎಂದು ಜನರು ನಂಬುವಂತೆ ಮಾಡಿದ್ದರು. ಇದನ್ನು ನಂಬಿದ ನೂರಾರು ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು, ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಇದಕ್ಕೆ ಸದಸ್ಯರಾಗಿ ಸೇರಿಕೊಂಡರು.