ಶಿಮ್ಲಾ:ಇಲ್ಲಿನ ಹೀರಾ ನಗರದಲ್ಲಿ ಬುಧವಾರ ಹೆಚ್‌ಆರ್‌ಟಿಸಿ ಸರ್ಕಾರಿ ಬಸ್ ಕಮರಿಗೆ ಬಿದ್ದ ಪರಿಣಾಮ 20 ಜನರು ಗಾಯಗೊಂಡಿದ್ದು, ಇಬ್ಬರು ಸಿಲುಕಿ ಕೊಂಡಿದ್ದಾರೆ. ಬಸ್ ಕಂಗ್ರಾದ ನಗ್ರೋಟಾದಿಂದ ಶಿಮ್ಲಾಕ್ಕೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ. ಈ ವೇಳೆ, ಬಸ್ನಲ್ಲಿ 25 ಪ್ರಯಾಣಿಕರು ಸಂಚರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.
ಶಿಮ್ಲಾ: ಕಂದಕಕ್ಕೆ ಬಿದ್ದ ಸರ್ಕಾರಿ ಬಸ್.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - ಶಿಮ್ಲಾದಲ್ಲಿ ಕಂದಕಕ್ಕೆ ಬಿದ್ದ ಸರ್ಕಾರಿ ಬಸ್
ಶಿಮ್ಲಾದ ಹೀರಾ ನಗರದಲ್ಲಿ ಬುಧವಾರ ಹೆಚ್‌ಆರ್‌ಟಿಸಿ ಸರ್ಕಾರಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2 ಜನ ಬಸ್ನಡಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.
ಕಂದಕಕ್ಕೆ ಬಿದ್ದ ಸರ್ಕಾರಿ ಬಸ್
ಮಾಹಿತಿ ತಿಳಿದು ರಾಜ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲಾ ಗಾಯಾಳುಗಳನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಕಾರಣ ತಿಳಿದು ಬರಬೇಕಿದ್ದು,ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಓದಿ:ಟೋಲ್ ಬೂತ್ನಲ್ಲಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ