ಮುಂಬೈ:ಕಳೆದ ವರ್ಷದಿಂದ ಇಲ್ಲಿಯವರೆಗೆ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಒಟ್ಟು 20 ಲಕ್ಷಕ್ಕೂ ಅಧಿಕ ಜನರಿಗೆ ಮಾಸ್ಕ್ ಹಾಕಿಕೊಳ್ಳದ್ದಕ್ಕೆ ದಂಡ ವಿಧಿಸಿದೆ.
ಮಾಸ್ಕ್ ದಂಡ; 20 ಲಕ್ಷ ಜನರಿಂದ 40 ಕೋಟಿ ವಸೂಲಿ.. ಎಲ್ಲಿ ಗೊತ್ತಾ? - ಮುಂಬೈ ಸುದ್ದಿ
ಕಳೆದ ವರ್ಷದಿಂದ ಇಲ್ಲಿಯವರೆಗೆ ಮಾಸ್ಕ್ ಹಾಕಿಕೊಳ್ಳದ 20 ಲಕ್ಷ ಜನರಿಗೆ ದಂಡ ವಿಧಿಸಿರುವ ಘಟನೆ ಮಹಾರಾಷ್ಟ್ರಾದ ಮುಂಬೈನಲ್ಲಿ ನಡೆದಿದೆ.
ಮಾಸ್ಕ್ ಹಾಕಿಕೊಳ್ಳದ 20 ಲಕ್ಷ ಜನರಿಗೆ ದಂಡ
ಹೌದು, ಏಪ್ರಿಲ್ 2020 ರಿಂದ ಮಾರ್ಚ್ 21, 2021ರವರೆಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಒಟ್ಟು 20 ಲಕ್ಷಕ್ಕೂ ಅಧಿಕ ಜನರಿಗೆ ಮಾಸ್ಕ್ ಹಾಕಿಕೊಳ್ಳದ್ದಕ್ಕೆ ದಂಡ ವಿಧಿಸಿದೆ.
ಇನ್ನು ದಂಡದ ಮೊತ್ತ ಬರೋಬ್ಬರಿ 40 ಕೋಟಿಗೂ ಹೆಚ್ಚು ನಗದು ಸಂಗ್ರಹವಾಗಿದೆ. ಇದರ ಬಗ್ಗೆ ಅಧಿಕೃತವಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಹೇಳಿದೆ.