ಅಮರಾವತಿ(ಆಂಧ್ರಪ್ರದೇಶ):ಪ್ಲಾಸ್ಟಿಕ್ ಬಳಕೆಗೆ ಸರ್ಕಾರ ಎಷ್ಟೇ ಕಡಿವಾಣ ಹಾಕಿದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಮಾರಕ ಪ್ಲಾಸ್ಟಿಕ್ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಹಲವು ಘಟನೆಗಳೂ ನಡೆದಿವೆ. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಇಚೋಡ ಮಂಡಲದ ಅಡೆಗಾಮ ಎಂಬಲ್ಲಿ ಬರೋಬ್ಬರಿ 20 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಹಸುವಿನ ಹೊಟ್ಟೆಯಲ್ಲಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಈ ಪ್ಲಾಸ್ಟಿಕ್ಅನ್ನು ಹೊರತೆಗೆದಿದ್ದಾರೆ.
ಕಳೆದ 10 ದಿನಗಳಿಂದ ಹಸು ಸರಿಯಾಗಿ ಹಾಲು ಕೊಡದೇ, ಹೊಟ್ಟೆ ಉಬ್ಬರದಿಂದ ಬಳಲುತ್ತಿತ್ತು. ಇದನ್ನು ಗಮನಿಸಿದ ಹಸುವಿನ ಮಾಲೀಕ ಪಶು ವೈದ್ಯರನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇರುವುದು ಗೊತ್ತಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನಡೆಸಿದಾಗ ಹಸುವಿನ ಹೊಟ್ಟೆಯಿಂದ ಬರೋಬ್ಬರಿ 20 ಕೆಜಿ ತ್ಯಾಜ್ಯ ಹೊರಬಂದಿದೆ. ನರಳಾಡುತ್ತಿದ್ದ ಮೂಕಪ್ರಾಣಿಯ ಜೀವ ಉಳಿದಿದೆ.