ಕರ್ನಾಟಕ

karnataka

ETV Bharat / bharat

ಬಾಂಗ್ಲಾದ 20 ಮೀನುಗಾರರ ರಕ್ಷಿಸಿದ ಒಡಿಶಾ ಮೀನುಗಾರರು - ಭಾರತೀಯ ಕೋಸ್ಟ್​ಗಾರ್ಡ್​ ಮತ್ತು ಮರೈನ್ ಕಾಪ್ಸ್

ತಾವು ತಂದಿದ್ದ ದವಸ-ಧಾನ್ಯಗಳು ಕೇವಲ 7 ದಿನಕ್ಕೆ ಖಾಲಿಯಾಗಿದ್ದವು. ತಾವು ಸಮುದ್ರದಲ್ಲಿ ಯಾವ ಜಾಗದಲ್ಲಿದ್ದೇವೆ ಎಂಬುದನ್ನು ತಿಳಿಯಲು ಕೂಡ ಅವರಿಂದ ಸಾಧ್ಯವಾಗಿರಲಿಲ್ಲ. ಈ ವೇಳೆ ಒಡಿಶಾ ಮೀನುಗಾರರು ಅವರ ಕಣ್ಣಿಗೆ ಬಿದ್ದಿದ್ದು, ಸಹಾಯಕ್ಕೆ ಮನವಿ ಮಾಡಿದ್ದರು..

20 bangladeshi fishermen rescued by Fishermen of Odisha
ಬಾಂಗ್ಲಾದ 20 ಮೀನುಗಾರರ ರಕ್ಷಿಸಿದ ಒಡಿಶಾ ಮೀನುಗಾರರು

By

Published : Dec 26, 2021, 5:37 PM IST

ಪಾರಾದೀಪ್, ಒಡಿಶಾ :ಸುಮಾರು 15 ದಿನಗಳಿಂದ ಸಮುದ್ರದಲ್ಲಿ ಸಿಲುಕಿದ್ದ 20 ಬಾಂಗ್ಲಾದೇಶ ಮೂಲದ ಮೀನುಗಾರರನ್ನು ಒಡಿಶಾದ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಬಂಗಾಳ ಕೊಲ್ಲಿಯಲ್ಲಿ ನಡೆದಿದೆ.

ಡಿಸೆಂಬರ್ 7ರಂದು ಬಾಂಗ್ಲಾದೇಶದಿಂದ ಮೀನುಗಾರಿಕೆಗೆ ತೆರಳಿದ 20 ಮಂದಿ ಸಮುದ್ರದಲ್ಲಿ ಸಿಲುಕಿದ್ದರು. ಭಾರಿ ಬಿರುಗಾಳಿಯ ಕಾರಣದಿಂದ ಬೋಟ್​ಗೆ ಹಾನಿಯಾದ ಕಾರಣ ಅವರು ದಡಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ತಾವು ತಂದಿದ್ದ ದವಸ-ಧಾನ್ಯಗಳು ಕೇವಲ 7 ದಿನಕ್ಕೆ ಖಾಲಿಯಾಗಿದ್ದವು. ತಾವು ಸಮುದ್ರದಲ್ಲಿ ಯಾವ ಜಾಗದಲ್ಲಿದ್ದೇವೆ ಎಂಬುದನ್ನು ತಿಳಿಯಲು ಕೂಡ ಅವರಿಂದ ಸಾಧ್ಯವಾಗಿರಲಿಲ್ಲ. ಈ ವೇಳೆ ಒಡಿಶಾ ಮೀನುಗಾರರು ಅವರ ಕಣ್ಣಿಗೆ ಬಿದ್ದಿದ್ದು, ಸಹಾಯಕ್ಕೆ ಮನವಿ ಮಾಡಿದ್ದರು.

ಈ ವಿಷಯವನ್ನು ಒಡಿಶಾ ಮೀನುಗಾರರು ಭಾರತೀಯ ಕೋಸ್ಟ್​ಗಾರ್ಡ್​ ಮತ್ತು ಮರೈನ್ ಕಾಪ್ಸ್​ಗೆ ತಿಳಿಸಿದ್ದು, ಕಾರ್ಯಾಚರಣೆ ಕೈಗೊಂಡ ರಕ್ಷಣಾ ಪಡೆಗಳು ಬಾಂಗ್ಲಾ ಮೀನುಗಾರರನ್ನು ರಕ್ಷಿಸಿದ್ದಾರೆ. ಮೀನುಗಾರರಿಂದ 15 ಮೊಬೈಲ್​ ಫೋನ್ ಮತ್ತು ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:Myanmar Massacre: 30 ಮಂದಿಯನ್ನು ಕೊಂದ ಸೇನೆ.. ಮಾನವಹಕ್ಕುಗಳ ಸಂಘಟನೆ ಖಂಡನೆ

ABOUT THE AUTHOR

...view details