ಕರ್ನಾಟಕ

karnataka

By ETV Bharat Karnataka Team

Published : Aug 29, 2023, 9:08 AM IST

ETV Bharat / bharat

ಆಗಸದಲ್ಲಿ ನಿಂತ ಮಗುವಿನ ಉಸಿರು.. ಬೆಂಗಳೂರು - ದೆಹಲಿ ವಿಮಾನ ತುರ್ತು ಭೂಸ್ಪರ್ಶ.. ಕಂದಮ್ಮನ ಪಾಲಿಗೆ ದೇವರಾದ ವೈದ್ಯರು..

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರು ನವದೆಹಲಿ ವಿಮಾನವನ್ನು ಭಾನುವಾರ ತಡರಾತ್ರಿ ನಾಗಪುರ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​​ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

baby stops breathing  baby stops breathing on Delhi bound Vistara flight  Bangalore Delhi Vistara flight  ವೈದ್ಯಕೀಯ ತುರ್ತು ಪರಿಸ್ಥಿತಿ  ಬೆಂಗಳೂರು ನವದೆಹಲಿ ವಿಮಾನ  ನಾಗಪುರ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​ ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನ  14 ತಿಂಗಳ ಮಗುವಿನ ಹೃದಯ ಸಮಸ್ಯೆ  ತುರ್ತು ಭೂಸ್ಪರ್ಶ ಮಾಡಿದ ವಿಮಾನ  ವೈದ್ಯೋ ನಾರಾಯಣೋ ಹರಿ  ಆಗಸದಲ್ಲಿ ನಿಂತ ಮಗುವಿನ ಉಸಿರು  ಕಂದಮ್ಮನ ಪಾಲಿಗೆ ದೇವರಾದ ವೈದ್ಯರು
ಆಗಸದಲ್ಲಿ ನಿಂತ ಮಗುವಿನ ಉಸಿರು

ನಾಗಪುರ, ಮಹಾರಾಷ್ಟ್ರ: ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನವನ್ನು ನಾಗಪುರನಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿತ್ತು. ವಿಮಾನದಲ್ಲಿ 14 ತಿಂಗಳ ಮಗುವಿನ ಹೃದಯ ಸಮಸ್ಯೆ ಇದ್ದು, ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ವಿಮಾನದಲ್ಲಿದ್ದ ವೈದ್ಯರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುಬೇಕಾಗಿದೆ ಎಂದು ಸೂಚಿಸಿದರು. ಹೀಗಾಗಿ ವಿಮಾನಯಾನದ ಮಾರ್ಗವನ್ನು ಬದಲಾಯಿಸಿದ ಪೈಲಟ್​ಗಳು ನಾಗ್ಪುರ್​ನಲ್ಲಿ ತುರ್ತು ಭೂಸ್ಪರ್ಶ ಮಾಡಿದರು.

ದೇವರಾದ ಸಹ ಪ್ರಯಾಣಿಕರು: ಮಗುವಿನ ಸ್ಥಿತಿ ಹದಗೆಟ್ಟು ಉಸಿರಾಟ ಸ್ಥಗಿತಗೊಂಡಿದ್ದು, ವಿಮಾನದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ಜೊತೆ ಸಹ ಪ್ರಯಾಣಿಕರು ಕೈ ಜೋಡಿಸಿದರು. ಅವರು ತಕ್ಷಣ ಮಗುವಿಗೆ ಸಿಪಿಆರ್ ನೀಡಿದರು ಮತ್ತು ಸಾಧ್ಯವಾದಷ್ಟು ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿದರು. ಸಿಪಿಆರ್​ ಬಳಿಕ ಮಗು ಉಸಿರಾಡತೊಡಗಿದೆ. ಬಳಿಕ ಲಭ್ಯವಿರುವ ಸಂಪನ್ಮೂಲಗಳ ಸಹಾಯದಿಂದ ಎಲ್ಲರೂ 45 ನಿಮಿಷಗಳ ಕಾಲ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಯಿತು.

ತುರ್ತು ಭೂಸ್ಪರ್ಶ ಮಾಡಿದ ವಿಮಾನ: ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ ವಿಮಾನಯಾನ ತಂಡವು ತುರ್ತು ಭೂಸ್ಪರ್ಶಕ್ಕಾಗಿ ನಾಗ್ಪುರ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಬಳಿಕ ಅಧಿಕಾರಿಗಳು ತುರ್ತು ಭೂಸ್ಪರ್ಶಕ್ಕೆ ಅನುಮತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಯ ಆಂಬ್ಯುಲೆನ್ಸ್ ಸಿದ್ಧವಾಗಿ ನಿಂತಿತ್ತು. ವಿಮಾನ ಇಳಿದ ತಕ್ಷಣ ಮಗುವನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲಾಯಿತು.

'ವೈದ್ಯೋ ನಾರಾಯಣೋ ಹರಿ' : ದೆಹಲಿ ಏಮ್ಸ್ ಕೂಡ ವಿಸ್ತಾರಾ ವಿಮಾನದ ಈ ಘಟನೆಯನ್ನು ಉಲ್ಲೇಖಿಸಿದೆ. ಬಾಲಕಿಯ ಜೀವ ಉಳಿಸಿದ 5 ವೈದ್ಯರು ದೆಹಲಿಯ ಏಮ್ಸ್‌ನಿಂದ ಬಂದವರು. ಅವರ ಹೆಸರುಗಳು ಡಾ. ನವದೀಪ್ ಕೌರ್ (ಅರಿವಳಿಕೆ ವಿಭಾಗ), ಡಾ. ದಮನ್‌ದೀಪ್ ಸಿಂಗ್ (ಕಾರ್ಡಿಯಾಕ್ ರೇಡಿಯಾಲಜಿ), ಡಾ. ರಿಷಭ್ ಜೈನ್ (ಮಾಜಿ AIIMS ರೇಡಿಯಾಲಜಿ), ಡಾ. ಓಶಿಕಾ (sr OBG) ಮತ್ತು ಡಾ. ಅವಿಚ್ಲಾ ತಕ್ಸಕ್ (sr ಕಾರ್ಡಿಯಾಕ್ ವಿಕಿರಣಶಾಸ್ತ್ರ) ಎಂದು ತಿಳಿದುಬಂದಿದೆ.

ಈಗ ಹೆಣ್ಣು ಮಗುವಿನ ಸ್ಥಿತಿ ಹೇಗಿದೆ?:ಕಿಮ್ಸ್ - ಕಿಂಗ್ಸ್‌ವೇ ಆಸ್ಪತ್ರೆ ಬಿಡುಗಡೆ ಮಾಡಿರುವ ಅಪ್‌ಡೇಟ್ ಪ್ರಕಾರ, ಹೆಣ್ಣು ಮಗು ಪ್ರಸ್ತುತ ಡಾ. ಕುಲದೀಪ್ ಸುಖದೇವ್ ಅವರ ಆರೈಕೆಯಲ್ಲಿದೆ. ಆಸ್ಪತ್ರೆಯ ಪ್ರಕಾರ, ಮಗು ಇನ್ನೂ ಪ್ರಜ್ಞಾಹೀನಳಾಗಿದ್ದಾಳೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಹಲವು ಜೀವರಕ್ಷಕ ಔಷಧಗಳನ್ನು ನೀಡಲಾಗುತ್ತಿದೆ. ಹೆಣ್ಣು ಮಗುವಿನ ಕುಟುಂಬ ಮತ್ತು ಸಂಬಂಧಿಕರಿಗೆ ನಿಯಮಿತವಾಗಿ ಸಲಹೆ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಓದಿ:ರಫೇಲ್​​​ ಖರೀದಿ ವಿಚಾರ... ಭಾರತಕ್ಕೆ ಭೇಟಿ ನೀಡಿ ಚರ್ಚಿಸಿದ ಫ್ರೆಂಚ್​ ನಿಯೋಗ : ಮೂಲಗಳು

ABOUT THE AUTHOR

...view details