ಬಹ್ರೈಚ್(ಉತ್ತರ ಪ್ರದೆಶ): ರಿಸಿಯಾ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಮುಖಾಮುಖಿಯಾಗಿ ಬಂದಿವೆ. ಕ್ರಾಸಿಂಗ್ ಮಾಡುವಾಗ ಆದ ಲೋಪದಿಂದ ಈ ಸಮಸ್ಯೆ ಆಗಿದೆ. ಲೊಕೊ ಪೈಲಟ್‌ಗಳ ಮುಂಜಾಗ್ರತೆಯಿಂದ ಎರಡೂ ರೈಲುಗಳು ಡಿಕ್ಕಿಯಿಂದ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದೆ. ಎರಡು ರೈಲುಗಳು ಮುಖಾಮುಖಿಯಾಗಿ ಆಗಿರುವುದನ್ನು ಗಮನಿಸಿದ ಪ್ರಯಾಣಿಕರು ರೈಲಿನಿಂದ ಇಳಿದು ಓಡಲು ಪ್ರಾರಂಭಿಸಿದ್ದಾರೆ.
ಸ್ಥಳೀಯ ಮಾಹಿತಿಯ ಪ್ರಕಾರ, ಬಹ್ರೈಚ್‌ಗೆ ಹೋಗಲು ರಿಸಿಯಾ ನಿಲ್ದಾಣದಲ್ಲಿ 05360 ಸಂಖ್ಯೆಯ ರೈಲು ಮೂರನೇ ಟ್ರ್ಯಾಕ್ನಲ್ಲಿ ನಿಂತಿತ್ತು. ಇದೇ ಸಮಯದಲ್ಲಿ ಬಹ್ರೈಚ್‌ನಿಂದ ಬಂದ 05361 ಸಂಖ್ಯೆಯ ರೈಲು ಸಹ ಅದೇ ಟ್ರ್ಯಾಕ್ನಲ್ಲಿ ಬಂದ ಕಾರಣ ಗೊಂದಲಕ್ಕೆ ಕಾರಣವಾಯಿತು. ಈ ವೇಳೆ ಬಹ್ರೈಚ್‌ಗೆ ಹೋಗಲು ಸಿದ್ಧವಾಗಿದ್ದ ರೈಲಿನ ಲೊಕೊ ಪೈಲಟ್ ಎಂಜಿನ್ ಲೈಟ್ ಆನ್ ಮಾಡಿ ಮತ್ತು ರೆಡ್ ಫ್ಲಾಗ್ ತೋರಿಸಿ ರೈಲನ್ನು ನಿಲ್ಲಿಸಿದ್ದಾನೆ. ರೈಲು ನಿಂತ ತಕ್ಷಣ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ಸ್ಥಳೀಯರ ಗುಂಪು ನಿಲ್ದಾಣದಲ್ಲಿ ಜಮಾಯಿಸಿತು.