ಶ್ರೀನಗರ(ಜಮ್ಮು-ಕಾಶ್ಮೀರ):ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಿನ್ನೆ ಸಂಜೆಯಿಂದ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ಅರಣ್ಯ ಪ್ರದೇಶದಲ್ಲಿ ಪ್ರಗತಿಯಲ್ಲಿದೆ. ಕಾರ್ಯಾಚರಣೆಯ ಸಮಯದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಮತ್ತು ಯೋಗಂಬರ್ ಸಿಂಗ್ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ.
ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಮತ್ತು ಯೋಗಂಬರ್ ಸಿಂಗ್ ತಮ್ಮ ಧೈರ್ಯ ಪ್ರದರ್ಶಿಸಿ ಕರ್ತವ್ಯ ನಿರ್ವಹಣೆ ಮಾಡಿದರು. ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣತ್ಯಾಗ ಮಾಡಿದ ಈ ಧೈರ್ಯಶಾಲಿಗಳ ಈ ಸೇವೆಗೆ ದೇಶ ಯಾವಾಗಲು ಋಣಿಯಾಗಿರುತ್ತದೆ.
ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ:
ಇವರ ವಯಸ್ಸಿನ್ನೂ 26 ಉತ್ತರಾಖಂಡದ ವಿಮಾನ್ ಗಾಂವ್ ನವರಾಗಿದ್ದಾರೆ, ತೆಹ್ರಿ ಗರ್ವಾಲ್ ಜಿಲ್ಲೆಯ ಪೋಸ್ಟ್- ಖಾಂಡ್ ನರೇಂದ್ರ ನಗರ ತಹಸೀಲ್ನವರು.
ರೈಫಲ್ ಮ್ಯಾನ್ ಯೋಗಂಬರ್ ಸಿಂಗ್:
ವಯಸ್ಸು 27 ವರ್ಷ, ಸಂಕರಿ ಹಳ್ಳಿಯ ನಿವಾಸಿ, ಪೋಸ್ಟ್- ತ್ರಿಶುಲ್ಲ, ತಹಸೀಲ್- ಪೋಖಾರಿ, ಜಿಲ್ಲೆ - ಚಮೋಲಿ, ಉತ್ತರಾಖಂಡ್.
ಇದನ್ನೂ ಓದಿ:ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಓರ್ವ ಸೇನಾಧಿಕಾರಿ ಸೇರಿ ಇಬ್ಬರು ಹುತಾತ್ಮ
ಮೆಂಧರ್ ಉಪ ವಿಭಾಗದ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ.
ಕಳೆದೊಂದು ವಾರದಿಂದ ಜಮ್ಮು ಕಾಶ್ಮೀರ ಪೂಂಚ್, ಸೋಪಿಯಾನ ಸೇರಿದಂತೆ ಭಾರತ್ - ಪಾಕ್ ಗಡಿಯ ವಿವಿಧ ಭಾಗಗಳಲ್ಲಿ ಉಗ್ರರು ಮತ್ತು ಸೇನೆ ನಡುವೆ ನಿರಂತರ ಕಾಳಗ ನಡೆಯುತ್ತಿದೆ. ಈ ಹಿಂದಿನ ಕಾರ್ಯಾಚರಣೆಯಲ್ಲಿ ಏಳು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಹಲವರನ್ನು ಬಂಧಿಸಿದೆ. ಇಂದಿನ ಕಾರ್ಯಾಚರಣ ಹೊರತಾಗಿ ಇಬ್ಬರು ಸೇನಾಧಿಕಾರಿಗಳು ಸೇರಿ ಐವರು ಯೋಧರು ಹತರಾಗಿದ್ದಾರೆ.