ಕರ್ನಾಟಕ

karnataka

By

Published : Aug 24, 2021, 5:46 PM IST

Updated : Aug 24, 2021, 5:54 PM IST

ETV Bharat / bharat

ಜಾರ್ಖಂಡ್​ನಲ್ಲಿ ಬಾಳೆ ಕೃಷಿ ಮಾಡುತ್ತಿದ್ದ ಇಬ್ಬರು ಕನ್ನಡಿಗರ ಬರ್ಬರ ಕೊಲೆ

ಮೈಸೂರಿನ ನಿವಾಸಿ ಲೋಕೇಶ್ ಪುಟ್ಟಸ್ವಾಮಿ ಹಾಗೂ ದೇವದಾಸು ಜಾರ್ಖಂಡ್​ನ ಗುಮ್ಲಾದಲ್ಲಿ ವಾಸವಾಗಿದ್ದರು. ಇದೀಗ ಅವರ ಕೊಲೆಯಾಗಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

2 person of Karnataka killed in gumla
2 person of Karnataka killed in gumla

ಗುಮ್ಲಾ(ಜಾರ್ಖಂಡ್​):ಕಳೆದ 15 ವರ್ಷಗಳ ಹಿಂದೆ ಜಾರ್ಖಂಡ್​ನ ಗುಮ್ಲಾದಲ್ಲಿ ವಾಸವಾಗಿ ಕೃಷಿ ಮಾಡುತ್ತಿದ್ದ ರಾಜ್ಯದ ಇಬ್ಬರು ಕನ್ನಡಿಗರ ಬರ್ಬರ ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.

ಗುಮ್ಲಾದ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕರ್ನಾಟಕದ ಯುವಕ ಲೋಕೇಶ್​​ ಕಳೆದ 15 ವರ್ಷಗಳಿಂದ ಇಲ್ಲಿ ವಾಸವಾಗಿ ಬಾಳೆ ಬೆಳೆ ಬೆಳೆಯುತ್ತಿದ್ದನು. ಕಳೆದ ಮೂರು ತಿಂಗಳ ಹಿಂದೆ ಮೀನು ಸಾಕಣೆಗಾಗಿ ತನ್ನ ಸಹಚರನೊಬ್ಬನಿಗೆ ಗುಮ್ಲಾಕ್ಕೆ ಕರೆತಂದಿದ್ದನು. ಇದೀಗ ಇವರಿಬ್ಬರ ಬರ್ಬರ ಕೊಲೆ ಮಾಡಲಾಗಿದೆ.

ಇಬ್ಬರು ಕನ್ನಡಿಗರ ಬರ್ಬರ ಕೊಲೆ

ಮೈಸೂರಿನ ನಿವಾಸಿ ಲೋಕೇಶ್ ಪುಟ್ಟಸ್ವಾಮಿ 2011ರಲ್ಲಿ ಘಾಗ್ರಾಕ್ಕೆ ಬಂದು ಬಾಳೆ ತೋಟದಲ್ಲಿ ಆಧುನಿಕ ಕೃಷಿ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆ ದೇವದಾಸು ಎಂಬ ಯುವಕನಿಗೆ ಮೈಸೂರಿನಿಂದ ತಾನು ವಾಸವಿದ್ದ ಸ್ಥಳಕ್ಕೆ ಕರೆಯಿಸಿಕೊಂಡಿದ್ದನು. ಇಂದು ಬೆಳಗ್ಗೆ ಆಟೋ ಚಾಲಕನೊಬ್ಬ ಸೌತೆಕಾಯಿ ತೆಗೆದುಕೊಳ್ಳಲು ಬಾಳೆ ತೋಟಕ್ಕೆ ಬಂದಾಗ ಮನೆಯ ಹೊರಗಡೆ ರಕ್ತದ ಮಡುವಿನಲ್ಲಿ ದೇವದಾಸು ಮೃತದೇಹ ಇದ್ದಿದ್ದನ್ನು ನೋಡಿದ್ದಾನೆ. ಈ ವೇಳೆ ಘಾಗ್ರಾ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಸರ್ಕಲ್​​ ಇನ್ಸ್​​ಪೆಕ್ಟರ್​​ ಶ್ಯಾಮಾನಂದ್​​ ಹಾಗೂ ಎಸ್​ಎಚ್​ಒ ಆಕಾಶ್​ ಕುಮಾರ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಲೋಕೇಶ್​ ಅವರ ಮೃತದೇಹ ಮನೆಯ ಕೋಣೆಯಲ್ಲಿ ಸಿಕ್ಕಿದೆ.

ಇದನ್ನೂ ಓದಿರಿ: ಏರಿಕೆಯತ್ತ ಮುಖ ಮಾಡಿದ ಚಿನ್ನ - ಬೆಳ್ಳಿ: 170 ರೂ. ತುಟ್ಟಿಯಾದ ಬಂಗಾರ

ಇಬ್ಬರ ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Aug 24, 2021, 5:54 PM IST

ABOUT THE AUTHOR

...view details