ಮಧುರೈ(ತಮಿಳುನಾಡು): ಪ್ರಸಿದ್ಧ ಆಚರಣೆಯಾದ ಮಧುರೈ ಕಲ್ಲಜಗರ್ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಲಕ್ಷಾಂತರ ಜನ ಭಕ್ತರು ನೆರೆದಿದ್ದ ವೇಳೆ ಭಾರಿ ಕಾಲ್ತುಳಿತ ಉಂಟಾಗಿದೆ.
ಮಧುರೈ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತ.. ಇಬ್ಬರು ದುರ್ಮರಣ, 8 ಮಂದಿಗೆ ಗಾಯ - ಮಧುರೈನಲ್ಲಿ ಕಲ್ಲಜಗರ್ ಉತ್ಸವದ ಕಾಲ್ತುಳಿತದಲ್ಲಿ ಇಬ್ಬರ ಸಾವು
ತಮಿಳುನಾಡಿನ ಮಧುರೈನಲ್ಲಿ ಜರುಗಿದ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತ ಉಂಟಾಗಿ ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆ.
ಕಾಲ್ತುಳಿತದಲ್ಲಿ ಇಬ್ಬರ ಸಾವು
ವಿಶ್ವವಿಖ್ಯಾತ ಮಧುರೈ ಚಿತ್ರೈ ಉತ್ಸವವು ಧ್ವಜಾರೋಹಣದೊಂದಿಗೆ ಆರಂಭವಾಗಿದೆ. ಉತ್ವದ ಪ್ರಮುಖ ಆಕರ್ಷಣೆಯಾದ ಸ್ವಾಮಿ ಕಲ್ಲಜಗರ್ ಸುಂದರರಾಜ ಪೆರುಮಾಳ್ ಚಿನ್ನದ ಕುದುರೆಯನ್ನೇರಿ ಬಳಿಕ ವೈಗೈ ನದಿಯಲ್ಲಿ ಮೀಯುವುದನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ 90 ವರ್ಷದ ವೃದ್ಧ ಮತ್ತು ಇನ್ನೊಬ್ಬ ಮಹಿಳೆ ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಓದಿ:ಕನ್ಯಾಕುಮಾರಿಯಲ್ಲಿಂದು ವಿಸ್ಮಯ.. ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ!