ಸೂರತ್ (ಗುಜರಾತ್): ಬಹಮಹಡಿ ಕಟ್ಟಡವೊಂದರಲ್ಲಿ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದ್ದು, ಇತರ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.
ದುರಸ್ತಿ ಮಾಡುತ್ತಿದ್ದಾಗ ಮುರಿದು ಬಿದ್ದ ಲಿಫ್ಟ್: ಇಬ್ಬರು ಕಾರ್ಮಿಕರ ದುರ್ಮರಣ - ಲಿಫ್ಟ್
ಸೂರತ್ನಲ್ಲಿ 14ನೇ ಮಹಡಿಯಲ್ಲಿ ದುರಸ್ತಿ ಮಾಡುತ್ತಿದ್ದಾಗ ಲಿಫ್ಟ್ ಮುರಿದು ಬಿದ್ದು ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ .
ದುರಸ್ತಿ ಮಾಡುತ್ತಿದ್ದಾಗ ಮುರಿದು ಬಿದ್ದ ಲಿಫ್ಟ್: ಇಬ್ಬರು ಕಾರ್ಮಿಕರ ದುರ್ಮರಣ
ಇಲ್ಲಿನ ಪಾಂಡೇಸರ ಬಮ್ರೋಲಿ ಪ್ರದೇಶದಲ್ಲಿರುವ ಕಟ್ಟಡದ 14ನೇ ಮಹಡಿಯಲ್ಲಿ ಲಿಫ್ಟ್ ದುರಸ್ತಿ ಮಾಡುತ್ತಿದ್ದಾಗ ಅದು ಏಕಾಏಕಿ ಮುರಿದು ಬಿದ್ದು ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಲಿಫ್ಟ್ ಜೊತೆಗೆ ಕೆಲ ಕಾರ್ಮಿಕರು ಕೆಳಗೆ ಬಿದ್ದಿದ್ದಾರೆ. ಪರಿಣಾಮ ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು..! ವಿಡಿಯೋ