ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಮತ್ತಿಬ್ಬರಿಗೆ ವಕ್ಕರಿಸಿದ ಝಿಕಾ : ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ - ಝಿಕಾ ವೈರಸ್ ಇದೀಗ ಪತ್ತೆ

ರೋಗದ ಲಕ್ಷಣಗಳು ಸಾಮಾನ್ಯವಾಗಿದೆ. ಜ್ವರ, ಚರ್ಮ ಸಂಬಂಧಿ ಕಾಯಿಲೆಗಳು, ಸ್ನಾಯು-ಕೀಲು ನೋವು, ಸುಸ್ತು, ತಲೆನೋವು ಕಂಡು ಬರುತ್ತದೆ..

ಝಿಕಾ
ಝಿಕಾ

By

Published : Jul 14, 2021, 2:33 PM IST

ತಿರುವನಂತಪುರಂ(ಕೇರಳ) :ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಝಿಕಾ ವೈರಸ್ ಇದೀಗ ಮತ್ತೆ ಇಬ್ಬರಲ್ಲಿ ದೃಢಪಟ್ಟಿದ್ದು ಆತಂಕ ಮನೆ ಮಾಡಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು 16 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಝಿಕಾ ವೈರಸ್ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಜುಲೈ 9ರಂದು ಕೇರಳದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ದೃಢಪಟ್ಟಿತ್ತು. ಈ ರೋಗವು ಸೊಳ್ಳೆಗಳಿಂದ ಹರಡಲಿದೆ ಎಂದು ತಿಳಿದು ಬಂದಿದೆ. ರೋಗದ ಲಕ್ಷಣಗಳು ಸಾಮಾನ್ಯವಾಗಿದೆ. ಜ್ವರ, ಚರ್ಮ ಸಂಬಂಧಿ ಕಾಯಿಲೆಗಳು, ಸ್ನಾಯು-ಕೀಲು ನೋವು, ಸುಸ್ತು, ತಲೆನೋವು ಕಂಡು ಬರುತ್ತದೆ. ಈಗಾಗಲೇ ಕೋವಿಡ್​ನಿಂದ ತತ್ತರಿಸಿರುವ ಜನತೆಗೆ ಝಿಕಾ ಮತ್ತೊಂದು ಆಘಾತ ನೀಡಿದೆ.

ABOUT THE AUTHOR

...view details