ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಡಿಸೆಂಬರ್ 5 ರಿಂದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆ ಸಂಬಂಧ ಇದೀಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ.
ಮೃತರನ್ನು ಸುಬ್ಬರವಮ್ಮ (56), ಚಂದ್ರ ರಾವ್ (50) ಎಂದು ಗುರುತಿಸಲಾಗಿದೆ. ವಿಜಯವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಸುಬ್ಬರವಮ್ಮಗೆ ಕೋವಿಡ್ ಸೋಂಕು ಕೂಡ ತಗುಲಿತ್ತು ಹಾಗೂ ಚಂದ್ರ ರಾವ್ಗೆ ಶ್ವಾಸಕೋಶದ ಸಮಸ್ಯೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಡಿ.6 ರಂದು ಶ್ರೀಧರ್ (45) ಎಂಬ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದರು. ಇದೀಗ ಈ ಕಾಯಿಲೆಗೆ ಒಟ್ಟು ಮೂವರು ಬಲಿಯಾದಂತಾಗಿದೆ.