ಕರ್ನಾಟಕ

karnataka

ETV Bharat / bharat

ಗೋವಾ ಬೀಚ್​​ನಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ: ಸಿಎಂ ವಿವಾದಿತ ಹೇಳಿಕೆಗೆ ಆಕ್ರೋಶ - ಗೋವಾ ಬೀಚ್​ ರೇಪ್​

ಗೋವಾದ ಬೆನೌಲಿಮ್​ ಬೀಚ್​ನಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಸಿಎಂ ಸದನದಲ್ಲಿ ಹೇಳಿಕೆ ನೀಡಿದ್ದು, ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ.

CM Pramod Sawant
CM Pramod Sawant

By

Published : Jul 29, 2021, 5:08 PM IST

ಪಣಜಿ:ಕಳೆದೆರಡು ದಿನಗಳ ಹಿಂದೆ ಗೋವಾ ಬೀಚ್​ವೊಂದರಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೀಡಿರುವ ಹೇಳಿಕೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಪ್ರತಿಪಕ್ಷ ವಾಗ್ದಾಳಿ ನಡೆಸಿದೆ.

ವಿಧಾನಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಮಕ್ಕಳು ತಡರಾತ್ರಿವರೆಗೆ ಬೀಚ್​ನಲ್ಲಿ ಯಾಕೆ ಇರುತ್ತಾರೆ ಎಂಬ ಬಗ್ಗೆ ಅವರ ಪೋಷಕರನ್ನು ಪ್ರಶ್ನೆ ಮಾಡಬೇಕು. ಜತೆಗೆ ಇದರ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಕ್ಕಳು ಮನೆಯಲ್ಲಿ ತಮ್ಮ ಪೋಷಕರ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕಾಗಿ ಅದರ ಜವಾಬ್ದಾರಿ ಪೊಲೀಸರು ಹಾಗೂ ಸರ್ಕಾರದ ಮೇಲೆ ಹಾಕುವುದು ಸರಿಯಲ್ಲ. 14 ವರ್ಷದ ಮಕ್ಕಳು ತಡರಾತ್ರಿ ಬೀಚ್​​ನಲ್ಲಿ ಇರಲು ಕಾರಣ ಏನು ಎಂಬುದರ ಬಗ್ಗೆ ಪೋಷಕರನ್ನ ಪ್ರಶ್ನೆ ಮಾಡಬೇಕು ಎಂದಿದ್ದಾರೆ.

ಗೋವಾ ಮುಖ್ಯಮಂತ್ರಿ ಸಾವಂತ್​ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಂತೆ ಅದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಗೋವಾದಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಿಎಂ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಗೋವಾ ಫಾರ್ವರ್ಡ್​​ ಪಕ್ಷದ ಶಾಸಕ ವಿಜಯ್​ ಸರ್ದೇಸಾಯಿ ಹೇಳಿದ್ದಾರೆ. ರಾತ್ರಿ ವೇಳೆ ತಿರುಗಾಡಲು ನಾವು ಯಾಕೆ ಹೆದರಬೇಕು? ಅಪರಾಧಿಗಳು ಜೈಲಿನಲ್ಲಿದ್ದರೆ ನಾವು ಯಾವುದೇ ತೊಂದರೆ ಇಲ್ಲದೇ ಇರಬಹುದು ಎಂದಿದ್ದಾರೆ. ರಾಜ್ಯ ಸರ್ಕಾರ ನಮ್ಮ ಸುರಕ್ಷತೆ ಬಗ್ಗೆ ಭರವಸೆ ನೀಡಲು ಸಾಧ್ಯವಾಗದಿದ್ದರೆ ಅವರು ಆಡಳಿತ ನಡೆಸುತ್ತಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ: ಒಬಿಸಿ, ಆರ್ಥಿಕ ದುರ್ಬಲ ವರ್ಗಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ!

ಬೆನೌಲಿಮ್​ ಬೀಚ್​ನಲ್ಲಿ ಕಳೆದ ಎರಡು ದಿನಗಳ ಹಿಂದೆ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ವೆಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಗಳನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ಸದನದಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details