ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದ ಅಪ್ರಾಪ್ತೆಯರ ಅಪಹರಣ; ಹೈದರಾಬಾದ್​ನಲ್ಲಿ ರೇಪ್​ - ಅಪ್ರಾಪ್ತೆಯರ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದಿಂದ ಇಬ್ಬರು ಬಾಲಕಿಯರ ಅಪಹರಣ ಮಾಡಿರುವ ಕಾಮುಕರು ಹೈದರಾಬಾದ್​ಗೆ ಕರೆತಂದು ಅತ್ಯಾಚಾರವೆಸಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Girls rape
Girls rape

By

Published : Jun 24, 2021, 7:55 PM IST

ಬಲ್ಲಿಯಾ (ಉತ್ತರ ಪ್ರದೇಶ):ಉತ್ತರ ಪ್ರದೇಶದಿಂದ ಇಬ್ಬರು ಅಪ್ರಾಪ್ತೆಯರ ಅಪಹರಣ ಮಾಡಿ ಹೈದರಾಬಾದ್​ಗೆ ಕರೆತರಲಾಗಿದ್ದು, ಇಲ್ಲಿ ಅವರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 12 ಹಾಗೂ 16 ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಈ ದುಷ್ಕೃತ್ಯ ನಡೆದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ:Alcohol Delivery ಪ್ಲಾಟ್​ಫಾರ್ಮ್​​ನಿಂದ ಮೋಸ ಹೋದ ನಟಿ ಶಬಾನಾ ಅಜ್ಮಿ!

ಉತ್ತರ ಪ್ರದೇಶದ ನರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಇಬ್ಬರು ಬಾಲಕಿಯರು ಇವರಾಗಿದ್ದಾರೆಂದು ಸಬ್​ ಇನ್ಸ್​ಪೆಕ್ಟರ್​ ಧರ್ಮೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಜೂನ್​ 14ರಂದು ಇವರ ಅಪಹರಣ ಮಾಡಲಾಗಿದ್ದು, ಎರಡು ದಿನಗಳ ನಂತರ ಬಾಲಕಿಯ ತಂದೆ ಅಪಹರಣವಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದರು.

ಇವರ ಅಪಹರಣದ ಹಿಂದೆ ಅದೇ ಗ್ರಾಮದ ವ್ಯಕ್ತಿಯ ಕೈವಾಡವಿದೆ ಎನ್ನಲಾಗಿದ್ದು, ಹೈದರಾಬಾದ್​ಗೆ ಕರೆತರುತ್ತಿದ್ದಂತೆ ಇವರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದಿದ್ದಾರೆ. ಬಾಲಕಿಯರಿಬ್ಬರು ನೀಡಿರುವ ಮಾಹಿತಿ ಆಧಾರದ ಮೇಲೆ ಇದೀಗ ಐಪಿಸಿ ಸೆಕ್ಷನ್​ 366,376 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಅವರಿಬ್ಬರನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದಿದ್ದಾರೆ.

ಬಾಲಕಿಯರ ಅಪಹರಣ ಮಾಡಿರುವ ಆರೋಪಿಗಳಿಗೋಸ್ಕರ ಇದೀಗ ಶೋಧಕಾರ್ಯ ಆರಂಭಿಸಲಾಗಿದ್ದು, ಆದಷ್ಟು ಬೇಗ ಅವರನ್ನ ಬಂಧನ ಮಾಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details