ಕರ್ನಾಟಕ

karnataka

ETV Bharat / bharat

ಮದುವೆ ಮುಗಿಸಿ ಬರುತ್ತಿದ್ದ ಪಿಕ್ ​ಅಪ್ ಪಲ್ಟಿ: ಇಬ್ಬರು ಸಾವು, 6 ಜನಕ್ಕೆ ಗಾಯ ​ - ETV Bharath Kannada news

ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಿಕ್​ ಅಪ್ ಪಲ್ಟಿ - ಅಪಘಾತದಲ್ಲಿ 2 ಸಾವು, ಆರು ಜನಕ್ಕೆ ಗಾಯ - ವಿವಾಹ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ

2-killed-6-injured-as-pick-up-truck-overturns-in-uttar-pradesh
ಮದುವೆ ಮುಗಿಸಿ ಬರುತ್ತಿದ್ದ ಪಿಕ್​ಅಪ್ ಪಲ್ಟಿ

By

Published : Feb 18, 2023, 7:56 AM IST

ಸೋನಭದ್ರ(ಉತ್ತರ ಪ್ರದೇಶ): ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಿಕ್​ಅಪ್ ಪಲ್ಟಿಯಾಗಿ ಅಪಘಾತವಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ರಾಬರ್ಟ್ಸ್‌ಗಂಜ್‌ನ ಕುಸಿದೌರ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪಿಕ್​ ಅಪ್​ನಲ್ಲಿದ್ದವರು ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರಾಣಸಿ ನಿವಾಸಿಗಳಾದ ಶಶಿ ಶರ್ಮಾ (35) ಮತ್ತು ವಿನಯ್ ರಾಜ್‌ಭರ್ (40) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡ ಆರು ಜನರಲ್ಲಿ ಅರುಣ್ (19) ಮತ್ತು ಅಜೀತ್ (20) ಸ್ಥಿತಿ ಗಂಭೀರವಾಗಿದೆ ಎಂದು ರಾಬರ್ಟ್ಸ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಲ್ಮುಕುಂದ್ ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ:ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ

ಗ್ಯಾಸ್​ ಟ್ಯಾಂಕರ್​ ಮತ್ತು ಟ್ರಕ್​ ನಡುವೆ ಡಿಕ್ಕಿ ನಾಲ್ವರು ಸಜೀವ ದಹನ:ನಿನ್ನೆ(ಶುಕ್ರವಾರ) ರಾಜಸ್ಥಾನದ ಅಜ್ಮೀರ್​ನಲ್ಲಿ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಈ ಡಿಕ್ಕಿಯ ನಂತರ ಭಾರೀ ಸ್ಫೋಟವಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟ ಪರಿಣಾಮ ಸುಮಾರು 500 ಮೀಟರ್ ದೂರದಲ್ಲಿ ನಿಂತಿದ್ದ ಟ್ರಕ್​ಗೂ ಬೆಂಕಿ ತಗುಲಿದೆ. ಅಪಘಾತದಲ್ಲಿ ಚಾಲಕರಿಬ್ಬರೂ ಸೇರಿ ನಾಲ್ವರು ಸುಟ್ಟು ಕರಕಲಾಗಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ತಡರಾತ್ರಿ ಎಲ್‌ಪಿಜಿ ಇಂಧನ ತುಂಬಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ಮಾರ್ಬಲ್ ತುಂಬಿದ್ದ ಟ್ರಕ್​ ಮಧ್ಯೆ ಡಿಕ್ಕಿಯಲ್ಲಿ ಸುಂದರ್, ಸುಭಾಷ್, ಅಜಿನಾ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಗ್ಯಾಸ್ ಟ್ಯಾಂಕರ್​​ನಲ್ಲಿ ಮೂರು ಚೇಂಬರ್ ಗ್ಯಾಸ್​ ಇದ್ದು, ಅಪಘಾತದಿಂದಾಗಿ ಗ್ಯಾಸ್ ಚೇಂಬರ್​ಗಳು ಒಂದರ ನಂತರ ಒಂದು ಹೊತ್ತಿಕೊಂಡ ಪರಿಣಾಮ ಒಟ್ಟು ಮೂರು ವಾಹನಗಳು ಸುಟ್ಟು ಭಸ್ಮವಾಗಿದೆ.

ಗ್ಯಾಸ್​ ತುಂಬಿದ್ದ ಟ್ಯಾಂಕರ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಗ್ನಿ ಜಾಲ್ವೆಯು ಸಮೀಪದ ಜಮೀನುಗಳು ಮತ್ತು ಅಂಗಡಿಗಳಿಗೂ ಹಬ್ಬಿಕೊಂಡಿದೆ. ರಸ್ತೆ ಪಕ್ಕದಲ್ಲಿ ಸಂಗ್ರಹಿಸಿಟ್ಟದ್ದ ಮೇವಿಗೂ ಬೆಂಕಿ ತಗುಲಿದೆ. ಆರು ಮನೆಗಳು ಬೆಂಕಿಗೆ ಆಹುತಿಯಾದ್ದು, ಐದು ಬೈಕ್‌ಗಳು ಸುಟ್ಟು ಹೋಗಿವೆ. ತಡರಾತ್ರಿ ನಡೆದ ಅವಘಡದಿಂದ ಬೆಚ್ಚಿ ಬಿದ್ದ ಸ್ಥಳೀಯರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಬಾವಿಯಿಂದ ನೀರನ್ನು ಸೇದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಸ್ಥಳೀಯರು ಮಾಹಿತಿ ನೀಡಿದ ಪ್ರಕಾರ ರಾತ್ರಿ ಏಕಾಏಕಿ ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ ಹತ್ತಿರದ ಆರು ಮನೆಗಳು ಅಗ್ನಿ ಜ್ವಾಲೆ ಸಿಲುಕಿದೆ. ಮನೆಯಲ್ಲಿದ್ದರು ಬೆಂಕಿ ತಗುಲಿರುವುದು ತಿಳಿಯುತ್ತಿದ್ದಂತೆ ಹರಡದಂತೆ ರಕ್ಷಿಸಿದ್ದಾರೆ. ಇದರಿಂದ ಸುತ್ತ ಮುತ್ತ ಇದ್ದ ಬಾಕಿ 20 ಮನೆಗಳು ಬಚಾವ್​ ಆಗಿದೆ.

ಇದನ್ನೂ ಓದಿ:ಮಿಸ್ಸಿಸ್ಸಿಪ್ಪಿ ಶೂಟೌಟ್: 6 ಮಂದಿ ಬಲಿ, ಶಂಕಿತ ಪೊಲೀಸ್​ ವಶಕ್ಕೆ

ABOUT THE AUTHOR

...view details