ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಭೂಕುಸಿತ: ಇಬ್ಬರು ಸಾವು, ಅವಶೇಷದಡಿ ಸಿಲುಕಿರುವ ಐವರು - ಪಿಥೋರಘರ್ ಜಿಲ್ಲೆಯ ಜುಮ್ಮಾಹಳ್ಳಿ ಬಳಿ ಸಂಭವಿಸಿದ ಭೂಕುಸಿತ

ಉತ್ತರಾಖಂಡವು ಮಳೆಗೆ ಮತ್ತೆ ನಲುಗಿದೆ. ರಾಜ್ಯಾದ್ಯಂತ ಭಾರಿ ಮಳೆಯಾಗಿದ್ದು, ಜುಮ್ಮಾಹಳ್ಳಿ ಬಳಿ ಸಂಭವಿಸಿದ ಭೂಕುಸಿತಕ್ಕೆ ಇಬ್ಬರು ಬಲಿಯಾಗಿದ್ದಾರೆ.

landslide
landslide

By

Published : Aug 30, 2021, 12:29 PM IST

ಡೆಹ್ರಾಡ್ಯೂನ್​(ಉತ್ತರಾಖಂಡ): ಪಿಥೋರಘರ್ ಜಿಲ್ಲೆಯ ಜುಮ್ಮಾಹಳ್ಳಿ ಬಳಿ ಸಂಭವಿಸಿದ ಭೂಕುಸಿತದಿಂದ ಇಬ್ಬರು ಸಾವನ್ನಪ್ಪಿದ್ದು, ಐವರು ಅವಶೇಷದಲ್ಲಿ ಸಿಲುಕಿದ್ದಾರೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸಿಎಂ, ಜುಮ್ಮಾಹಳ್ಳಿಯಲ್ಲಿ ಇಬ್ಬರು ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಆದೇಶಿಸಲಾಗಿದೆ. ಅವಶೇಷದಲ್ಲಿ ಸಿಲುಕಿರುವ ಜನರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಸಿಎಂ ಪುಷ್ಕರ್ ಸಿಂಗ್ ಧಾಮಿ ಟ್ವೀಟ್​

ಈ ಕುರಿತು ಮಾಹಿತಿ ನೀಡಿರುವ ಪಿಥೋರಘರ್ ಡಿಎಂ ಆಶೀಶ್ ಚೌಹಾಣ್​, ಈಗಾಗಲೇ ಎಸ್‌ಡಿಆರ್‌ಎಫ್ ಮತ್ತು ಎಸ್‌ಎಸ್‌ಬಿ ತಂಡಗಳನ್ನು ಜುಮ್ಮಾ ಗ್ರಾಮಕ್ಕೆ ಕಳುಹಿಸಲಾಗಿದೆ. ಐವರು ಅವಶೇಷದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದಿದ್ದಾರೆ.

ಜುಮ್ಮಾ ಗ್ರಾಮದಲ್ಲಿ ಐದು ವಸತಿ ಕಟ್ಟಡಗಳು ಮತ್ತು ಸಿರೊಡೆಯಾರ್ ಟೋಕ್‌ನಲ್ಲಿ ಎರಡು ವಸತಿ ಕಟ್ಟಡಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ. ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು, ಸೇತುವೆಗಳು ಮುರಿದು ಬಿದ್ದಿವೆ, ರಸ್ತೆಗಳು ಕೊಚ್ಚಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ABOUT THE AUTHOR

...view details