ಖಮ್ಮಂ :ಶ್ರೀರಾಮ ನವಮಿಯಂದು ಭಕ್ತರು ಸ್ಥಳೀಯ ದೇವಾಲಯದಲ್ಲಿ ಭಜನೆ ಮಾಡುತ್ತಾ ತಲ್ಲೀಣರಾಗಿದ್ದರು. ಕೆಲವೊಂದು ಮಕ್ಕಳು ದೇವಸ್ಥಾನದ ಮುಂದೆ ಆಟವಾಡುತ್ತಿದ್ದರು. ಆದ್ರೆ, ಯಮಸ್ವರೂಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿಲ್ಲದೇ ದೇವಸ್ಥಾನೊಳಗೆ ನುಗ್ಗಿದೆ. ಈ ವೇಳೆ ಒಂದೇ ಕುಟುಂಬದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಕೊಣಿಜರ್ಲ ತಾಲೂಕಿನ ಪಲ್ಲಿಪಾಡು ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ? :ರಾಮ ನವಮಿ ಹಿನ್ನೆಲೆ ಇಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಸೀತಾರಾಮ ಕಲ್ಯಾಣ ಜರುಗಿತು. ಸಂಜೆ ವೇಳೆ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರೆಲ್ಲರೂ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಲ ಮಕ್ಕಳು ದೇವಾಲಯದ ಮುಂದೆ ಆಟವಾಡುತ್ತಿದ್ದರು.
ಲೈಟ್ ಕಂಬಕ್ಕೆ ಡಿಕ್ಕಿ :ಇದೇ ಸಮಯದಲ್ಲಿ ಖಮ್ಮಂನಿಂದ ದುದ್ದೇಪೂಡಿ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಅತೀವೇಗದಿಂದ ದೇವಾಲಯದ ಮುಂದೆ ಇದ್ದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು ದೇವಾಲಯಕ್ಕೂ ನುಗ್ಗಿದೆ. ಪರಿಣಾಮ ಅಕ್ಕ-ತಂಗಿಯರಾದ ದೇದಿಪ್ಯಾ (9) ಮತ್ತು ಸಹಾಸ್ರ (7) ಎಂಬುವರು ಸೇರಿದಂತೆ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.