ಕರ್ನಾಟಕ

karnataka

ETV Bharat / bharat

ಅಮ್ರೀನ್‌ ಭಟ್‌ ಹತ್ಯೆಗೈದ ಇಬ್ಬರು ಎಲ್‌ಇಟಿ ಉಗ್ರರ ಹೆಡೆಮುರಿಕಟ್ಟಿದ ಭದ್ರತಾ ಪಡೆ - ಅವಂತಿಪೋರಾ ಎನ್‌ಕೌಂಟರ್‌

ಅವಂತಿಪೋರಾ ಎನ್‌ಕೌಂಟರ್‌ನಲ್ಲಿ ಟಿವಿ ಕಲಾವಿದೆ ಅಮ್ರೀನ್ ಭಟ್ ಹತ್ಯೆಗೈದ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

Vijay Kumar,IGP Kashmir
ಕಾಶ್ಮೀರ ಐಜಿಪಿ ವಿಜಯ್ ಕುಮಾರ್

By

Published : May 27, 2022, 7:30 AM IST

ಶ್ರೀನಗರ(ಜಮ್ಮು& ಕಾಶ್ಮೀರ):ಶ್ರೀನಗರದ ಸೌರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ. ಎಲ್‌ಇಟಿ ಭಯೋತ್ಪಾದಕರನ್ನು ಶಾಕಿರ್ ಅಹ್ಮದ್ ವಾಜಾ ಮತ್ತು ಅಫ್ರೀನ್ ಅಫ್ತಾಬ್ ಮಲಿಕ್ ಎಂದು ಗುರುತಿಸಲಾಗಿದೆ. ಅವಂತಿಪೋರಾದ ಅಗನ್‌ಹಜಿಪೋರಾ ಪ್ರದೇಶದಲ್ಲಿ ಉಗ್ರರು ಸಿಕ್ಕಿಬಿದ್ದಿದ್ದರು. ಇತ್ತೀಚೆಗೆ ಕಿರುತೆರೆ ನಟಿ ಅಮ್ರೀನ್ ಭಟ್ ಹತ್ಯೆಯಲ್ಲಿ ಅವರು ಭಾಗಿಯಾಗಿದ್ದರು.

ಪೊಲೀಸರು ಮತ್ತು ಭದ್ರತಾ ಪಡೆಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 3 ದಿನಗಳಲ್ಲಿ ಒಟ್ಟು 10 ಉಗ್ರರು, 7 ಎಲ್ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಕಿರುತೆರೆ ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಭಯೋತ್ಪಾದಕರು ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ 35 ವರ್ಷದ ಟಿಕ್‌ಟಾಕ್‌ ಸ್ಟಾರ್‌ ಅಮ್ರೀನ್‌ ಭಟ್‌ಳನ್ನು ಹತ್ಯೆ ಮಾಡಿದ್ದರು. ಟಿಕ್‌ಟಾಕ್ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಅಮ್ರೀನ್ ಭಟ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ರಾತ್ರಿ 7.55ರ ಸುಮಾರಿಗೆ ಚಾದೂರದಲ್ಲಿರುವ ಭಟ್ ಅವರ ನಿವಾಸದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅವರ ಸಹೋದರ ಸಂಬಂಧಿ ಫರಾನ್​ ಝಬೈರ್​ ಕೂಡಾ ಗಾಯೊಂಡಿದ್ದರು. ಅಮ್ರೀನ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮೃತಪಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಅಮ್ರೀನ್​ ಭಟ್​ ಗಾಯನ, ಕಿರುಚಿತ್ರದ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದರು. ಗುಂಡಿನ ದಾಳಿಯ ಬಳಿಕ ಆ ಪ್ರದೇಶಕ್ಕೆ ಬಿಗಿ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ:ಒಳನುಸುಳಲು ಯತ್ನ: ಕುಪ್ವಾರದಲ್ಲಿ ಮೂವರು ಎಲ್‌ಇಟಿ ಉಗ್ರರ ಹತ್ಯೆಗೈದ ಸೇನೆ

ABOUT THE AUTHOR

...view details