ಹೈದರಾಬಾದ್ :ಕಸ್ಟಮ್ಸ್ ಇಲಾಖೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ( ಸಿಐಎಸ್ಎಫ್) ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ಪೋರ್ಟ್ನಲ್ಲಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ 1.15 ಕೋಟಿ ರೂಪಾಯಿ ಮೌಲ್ಯದ ಸುಮಾರು ಎರಡೂವರೆ ಕೆಜಿ ಚಿನ್ನ ಜಪ್ತಿ ಮಾಡಿದೆ.
ದುಬೈನಿಂದ ಬರುತ್ತಿದ್ದ ಐವರು ಪ್ರಯಾಣಿಕರ ಲಗೇಜುಗಳನ್ನು ತಪಾಸಣೆ ನಡೆಸಿದಾಗ ಮಿಕ್ಸರ್ ಗ್ರೈಂಡರ್ ಮೋಟಾರ್ ಮತ್ತು ಜಾರ್ಗಳ ಚಾಕುಗಳಲ್ಲಿ ಚಿನ್ನ ಸಾಗಿಸುತ್ತಿದ್ದದು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಬಿಜೆಪಿ ಕ್ಯಾಂಪೇನ್ಗೆ ಕಾಂಗ್ರೆಸ್ನ ನಾಯಕ ಚಿದಂಬರಂ ಸೊಸೆ ಭಾವಚಿತ್ರ ಬಳಕೆ!