ಕರ್ನಾಟಕ

karnataka

ETV Bharat / bharat

ಹೊಸ ಇತಿಹಾಸ: ಆಂಧ್ರದಲ್ಲಿ 2.47 ಲಕ್ಷ ವರ್ಷ ಹಳೆಯ ಶಿಲಾಯುಗ ಉಪಕರಣ ಪತ್ತೆ, ವಿಶ್ವದಲ್ಲಿ ಸಂಚಲನ - ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸೈನ್ಸ್

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಹನುಮಂತು ನಿಪಾಡು ಎಂಬಲ್ಲಿ 2018ರಲ್ಲಿ ದೊರೆತ ಕಲ್ಲಿನ ಉಪಕರಣಗಳು 2.47 ಲಕ್ಷ ವರ್ಷಗಳಷ್ಟು ಹಳೆಯವು ಎಂದು ತಿಳಿದು ಬಂದಿದೆ. 'ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸೈನ್ಸ್' ನಲ್ಲಿ ವರದಿ ಪ್ರಕಟ.

ಹೊಸ ಇತಿಹಾಸ: ಆಂಧ್ರದಲ್ಲಿ 2.47 ಲಕ್ಷ ವರ್ಷ ಹಳೆಯ ಶಿಲಾಯುಗ ಉಪಕರಣ ಪತ್ತೆ - ವಿಶ್ವದಲ್ಲಿ ಸಂಚಲನ
2.47 Lakh-Year-Old Stone Age Tool Discovered in Andhra

By

Published : Aug 12, 2022, 12:30 PM IST

Updated : Aug 12, 2022, 12:45 PM IST

ವಿಜಯವಾಡ( ಆಂಧ್ರಪ್ರದೇಶ):ಹೋಮೋ ಸೇಪಿಯನ್ಸ್ ಅಂದರೆ ಪ್ರಾಚೀನ ಮಾನವರು ಸುಮಾರು 1.22 ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದರು ಮತ್ತು ಮಧ್ಯ ಪ್ರಾಚೀನ ಶಿಲಾಯುಗದ ಉಪಕರಣಗಳನ್ನು ತಮ್ಮೊಂದಿಗೆ ತಂದರು ಎಂಬ ಪುರಾತತ್ತ್ವ ಶಾಸ್ತ್ರಜ್ಞರ ಊಹೆಗಳನ್ನು ಇಲ್ಲಿಯವರೆಗೆ ನಂಬಲಾಗಿತ್ತು. ಆದರೆ, ಈ ಊಹೆಗಳು ಸುಳ್ಳೆಂದು ಈಗ ಸಾಬೀತಾಗುತ್ತಿದೆ. ಇತ್ತೀಚಿನ ಸಂಶೋಧನೆಯು ಈ ಕಲ್ಪನೆಯು ತಪ್ಪು ಎಂದು ಸಾಬೀತುಪಡಿಸಿದೆ. ಒಟ್ಟಾರೆಯಾಗಿ ಮಾನವ ವಿಕಾಸದ ಸಿದ್ಧಾಂತಗಳನ್ನು ಭಾರತವು ಬದಲಾಯಿಸುತ್ತಿದೆ.

ಸಂಶೋಧನೆ ನಡೆಸಿದ ಪ್ರಾಧ್ಯಾಪಕ ದೇವರ ಅನಿಲಕುಮಾರ್

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಹನುಮಂತುನಿಪಾಡು ಎಂಬಲ್ಲಿ 2018ರಲ್ಲಿ ದೊರೆತ ಕಲ್ಲಿನ ಉಪಕರಣಗಳು 2.47 ಲಕ್ಷ ವರ್ಷಗಳಷ್ಟು ಹಳೆಯವು ಎಂದು ತಿಳಿದು ಬಂದಿರುವುದು ಮಹತ್ವದ ಸಂಗತಿಯಾಗಿದೆ. ವಡೋದರದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ (ಎಂಎಸ್‌ಯು) ಪುರಾತತ್ವ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ದೇವರ ಅನಿಲಕುಮಾರ್ ಅವರ ನಿರ್ದೇಶನದಲ್ಲಿ ನಡೆದ ಸಂಶೋಧನೆಯಲ್ಲಿ ಇದು ಸಾಬೀತಾಗಿದೆ. ಹೋಮೋ ಸೆಪಿಯನ್ಸ್‌ಗಿಂತ 1.25 ಮಿಲಿಯನ್ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರು ಈ ಉಪಕರಣಗಳನ್ನು ತಯಾರಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಅನಿಲ್ ಕುಮಾರ್ ಅವರ ತಮ್ಮ ಪಿಎಚ್‌ಡಿ ಅಧ್ಯಯನದ ಭಾಗವಾಗಿ 2018 ರಲ್ಲಿ ಹಲವಾರು ಕಡೆಗಳಲ್ಲಿ ಉತ್ಖನನ ನಡೆಸಿದ್ದರು. ಉತ್ಖನನದ ಸಮಯದಲ್ಲಿ ಅವರು ಪ್ರಕಾಶಂ ಜಿಲ್ಲೆಯ ಕನಿಗಿರಿ ಬಳಿಯ ಪಾಲೇಟಿಯ ದಡದಲ್ಲಿರುವ ಹನುಮಂತುನಿಪಾಡು ಎಂಬಲ್ಲಿ ಮಧ್ಯ ಶಿಲಾಯುಗದ ಉಪಕರಣಗಳನ್ನು ಪತ್ತೆ ಮಾಡಿದ್ದಾರೆ. ಅಹಮದಾಬಾದ್‌ನಲ್ಲಿರುವ ಫಿಸಿಕಲ್ ರಿಸರ್ಚ್ ಲ್ಯಾಬ್‌ನ (ಪಿಆರ್‌ಎಲ್) ಲುಮಿನೆಸೆನ್ಸ್ ಪ್ರಯೋಗಾಲಯದಲ್ಲಿ 'ವೈಜ್ಞಾನಿಕ ಡೇಟಿಂಗ್' ಪರೀಕ್ಷೆಗಳ ಮೂಲಕ, ಈ ಕಲ್ಲಿನ ಉಪಕರಣಗಳು 2.47 ಲಕ್ಷ ವರ್ಷಗಳಷ್ಟು ಹಳೆಯವು ಎಂದು ದೃಢಪಡಿಸಲಾಗಿದೆ.

ಸಂಶೋಧನೆಗಳ ಕುರಿತು ದೇವರ ಅನಿಲಕುಮಾರ್ ಮತ್ತು ಅವರ ಸಹೋದ್ಯೋಗಿಗಳು ಮಂಡಿಸಿದ ಪ್ರಬಂಧಗಳನ್ನು 'ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸೈನ್ಸ್' ಇತ್ತೀಚೆಗೆ ಪ್ರಕಟಿಸಿದ ನಂತರ ಈ ವಿಷಯವು ಈಗ ಪ್ರಪಂಚದ ಗಮನ ಸೆಳೆದಿದೆ. ಅನಿಲಕುಮಾರ್ ಪ್ರಕಾಶಂ ಜಿಲ್ಲೆಯವರಾಗಿದ್ದಾರೆ.

ಇದು ಹೊಸ ಇತಿಹಾಸ..! :ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಮುಚ್ಚೆಟ್ಲಾ, ಚಿಂತಾಮಣಿಗವಿ ಮತ್ತು ಜ್ವಾಲಾಪುರ, ಗುಜರಾತ್‌ನ ಕಚ್ ಪ್ರದೇಶದ ಸಂಧವ್, ರಾಜಸ್ಥಾನದ ಕಟೋಟಿ ಮತ್ತು ಮಧ್ಯಪ್ರದೇಶದ ಧಬಾಲ್ಲೋದಲ್ಲಿ ಉತ್ಖನನದಲ್ಲಿ ದೊರೆತ ಕಲ್ಲಿನ ಉಪಕರಣಗಳನ್ನು ಆಧರಿಸಿ ಪುರಾತತ್ವ ಶಾಸ್ತ್ರಜ್ಞರು, ಆಧುನಿಕ ಮಾನವರು 1.22 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಿಂದ ಭಾರತಕ್ಕೆ ಬಂದರು ಎಂಬ ವಲಸೆ ಸಿದ್ಧಾಂತವನ್ನು ರೂಪಿಸಿದ್ದಾರೆ. ಅವರು ಬರುವಾಗ ತಮ್ಮೊಂದಿಗೆ ಮಧ್ಯಶಿಲಾಯುಗದ ಉಪಕರಣಗಳನ್ನು ತಂದರು ಎಂದು ಸಿದ್ಧಾಂತಗಳು ತಿಳಿಸುತ್ತವೆ. ಪ್ರಕಾಶಂ ಜಿಲ್ಲೆಯಲ್ಲಿ ದೊರೆತ ಕಲ್ಲಿನ ಉಪಕರಣಗಳನ್ನು 2.47 ಲಕ್ಷ ವರ್ಷಗಳಷ್ಟು ಹಿಂದೆ ಹೋಮೋರೆಕ್ಟಸ್ ಎಂಬ ಬುಡಕಟ್ಟು ಜನಾಂಗದವರು ಬಳಸಿರಬಹುದು.

ಈ ಸಂಶೋಧನೆಯಿಂದ ಇಲ್ಲಿಯವರೆಗೆ ಪ್ರಚಾರದಲ್ಲಿದ್ದ ಎಲ್ಲ ಸಿದ್ಧಾಂತಗಳು ತಪ್ಪು ಎಂದು ಸಾಬೀತಾಗಿದೆ. ಸದ್ಯ ಎಲ್ಲ ಪುರಾತತ್ವ ಶಾಸ್ತ್ರಜ್ಞರು ತಮ್ಮ ಗಮನವನ್ನು ಈಗ ಆಂಧ್ರಪ್ರದೇಶದ ಮೇಲೆ ತಿರುಗಿಸಿದ್ದಾರೆ. ಇದರಿಂದ ಹೆಚ್ಚಿನ ಸಂಶೋಧನೆಗೆ ಉತ್ತೇಜನ ಸಿಗಲಿದೆ ಎನ್ನುತ್ತಾರೆ ಖ್ಯಾತ ಪುರಾತತ್ವ ಸಂಶೋಧಕ, ಇತಿಹಾಸ ತಜ್ಞ ಎಮಾನಿ ಶಿವನಾಗಿ ರೆಡ್ಡಿ.

ಪುರಾತತ್ವ ಸಂಶೋಧನೆಗೆ ಹೊಸ ದಿಕ್ಕು:ತಮ್ಮ ಸಂಶೋಧನೆಯ ಫಲಿತಾಂಶಗಳು ಭಾರತದಲ್ಲಿ ಆಧುನಿಕ ಮಾನವರ ವಿಕಾಸದ ಕುರಿತು ಹೆಚ್ಚಿನ ಸಂಶೋಧನೆಗೆ ಕೊಡುಗೆ ನೀಡುತ್ತವೆ ಮತ್ತು ಹೊಸ ವಿಷಯಗಳನ್ನು ಬೆಳಕಿಗೆ ತರುತ್ತವೆ ಎಂದು ಅನಿಲ್ ಕುಮಾರ್ ಅವರು ಭರವಸೆ ವ್ಯಕ್ತಪಡಿಸಿದರು. ಈಟಿವಿ ಭಾರತ್ ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ತಮ್ಮ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ಪ್ರಾಧ್ಯಾಪಕ ದೇವರ ಅನಿಲಕುಮಾರ್ ನೀಡಿದ ಅಮೂಲ್ಯ ಮಾಹಿತಿ ಇಲ್ಲಿದೆ:ಪುರಾತತ್ವ ಶಾಸ್ತ್ರದಲ್ಲಿ ಎಂಎ ಓದಲು ಎಂಎಸ್ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ನಾನು ಪಿಎಚ್‌ಡಿ ಮಾಡಿದ್ದು, ಅದರ ಅಧ್ಯಯನದ ಭಾಗವಾಗಿ ಅಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಕಾಶಂ ಜಿಲ್ಲೆಯ ಗುಂಡ್ಲಕಮ್ಮ, ಪಾಲೇರು ಮತ್ತು ಮನ್ನೇರು ಪ್ರದೇಶಗಳಲ್ಲಿ ಆಧುನಿಕ ಮಾನವರ ಕುರುಹುಗಳ ಮೇಲೆ ಸಂಶೋಧನೆ ನಡೆಸುವುದು ನನ್ನ ಪಿಎಚ್‌ಡಿ ಅಧ್ಯಯನದ ಒಂದು ಭಾಗವಾಗಿದೆ.

ಅಲ್ಲಿನ ಉತ್ಖನನದಲ್ಲಿ ದೊರೆತ ಕಲ್ಲಿನ ಉಪಕರಣಗಳ ವೈಜ್ಞಾನಿಕ ಕಾಲಮಾನವು 2.47 ಲಕ್ಷ ವರ್ಷಗಳಷ್ಟು ಹಳೆಯದು ಎಂದು ಕಂಡು ಬಂದಿದೆ. ಉತ್ಖನನದಲ್ಲಿ ದೊರೆತ ಉಪಕರಣಗಳ ಬಗ್ಗೆ ನಮ್ಮ ವಿಜ್ಞಾನಿಗಳು ವೈಜ್ಞಾನಿಕ ಡೇಟಿಂಗ್ ಮಾಡಿಸುವುದು ಬಹಳ ಕಡಿಮೆ. ಹೀಗಾಗಿಯೇ ಬಹಳಷ್ಟು ವಿಷಯಗಳು ಬೆಳಕಿಗೆ ಬರುತ್ತಿಲ್ಲ. ಅಲ್ಲದೆ ಪಾಶ್ಚಾತ್ಯ ಪುರಾತತ್ವಶಾಸ್ತ್ರಜ್ಞರು ಹೇಳಿದ ಸಿದ್ಧಾಂತಗಳನ್ನೇ ಪ್ರಚಾರ ಮಾಡಲಾಗುತ್ತಿದೆ.

ಮಧ್ಯಯುಗದ ಉಪಕರಣಗಳು ಎಲ್ಲಿಂದಲೋ ಇಲ್ಲಿಗೆ ಬಂದಿದ್ದಲ್ಲ, ಅವೆಲ್ಲ ಇಲ್ಲೇ ತಯಾರಾಗಿವೆ ಎಂಬುದು ನಮ್ಮ ಸಂಶೋಧನೆಯ ಫಲವಾಗಿ ಬೆಳಕಿಗೆ ಬಂದಿದೆ. ಹೋಮೋಸೇಪಿಯನ್ನರಿಗಿಂತ ಬಹಳ ಹಿಂದೆಯೇ ಇಲ್ಲಿ ವಾಸಿಸುತ್ತಿದ್ದ ಯಾವುದೋ 'ಪ್ರಾಚೀನ ಹೋಮಿನಿನ್ಸ್' ಮಾನವ ಸಮುದಾಯದವರು ಪ್ರಾಣಿಗಳನ್ನು ಬೇಟೆಯಾಡಲು ಅವುಗಳನ್ನು ತಯಾರಿಸಿರಬಹುದು. ಆದರೆ ಆ ಕಾಲದ ಮಾನವನ ಪಳೆಯುಳಿಕೆಗಳು ಲಭ್ಯವಿಲ್ಲದ ಕಾರಣ, ಇಲ್ಲಿ ವಾಸಿಸುತ್ತಿದ್ದ ಮಾನವರು ಯಾರೆಂದು ಹೇಳಲು ಸಾಧ್ಯವಿಲ್ಲ.

ಇದನ್ನು ಓದಿ:2025ಕ್ಕೆ 'ಸೋಲಾರ್​ ಸೈಕಲ್​' ಪೂರ್ಣ: ಸೂರ್ಯನ ಮೇಲ್ಮೈ ಮತ್ತಷ್ಟು ಪ್ರಕ್ಷುಬ್ಧ, ಪರಿಣಾಮವೇನು ಗೊತ್ತೇ?

Last Updated : Aug 12, 2022, 12:45 PM IST

ABOUT THE AUTHOR

...view details