ಗುವಾಹಟಿ (ಅಸ್ಸೋಂ): ಹಿಜ್ಬ್ ಉಲ್ ಮುಜಾಹಿದ್ದೀನ್ ನೇಮಕಾತಿಗೆ ಸಂಬಂಧಿಸಿದಂತೆ 2018 ರಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹಟಿಯ ವಿಶೇಷ ಎನ್‌ಐಎ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ದೋಷಿ ಎಂದು ಘೋಷಿಸಿದೆ.
ಅಸ್ಸೋಂನ ಹೋಜೈ ಜಿಲ್ಲೆಯ ನಿವಾಸಿಗಳಾದ ಶಹನವಾಜ್ ಆಲಂ ಮತ್ತು ಒಮರ್ ಫಾರೂಕ್ ಅಪರಾಧಿಗಳು. ಇವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜೊತೆಗೆ ದಂಡವನ್ನು ಕಟ್ಟುವಂತೆ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ವಿರುದ್ಧ ಐಪಿಸಿ 120 ಬಿ,18, 18 ಬಿ, 19, ಮತ್ತು ಯುಎ (ಪಿ) ಕಾಯ್ದೆಯ 38 ರ ಅಡಿ ದೋಷಿಗಳೆಂದು ಘೋಷಿಸಲಾಗಿದೆ. ಇಬ್ಬರಿಗೂ 5 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ ಎಂದು ಡಿಸೆಂಬರ್ 24, 2022 ರಂದು ಎನ್ಐಎ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣವು ಆರಂಭದಲ್ಲಿ ಸೆಪ್ಟೆಂಬರ್ 14, 2018 ರಂದು ಹೋಜೈ ಜಿಲ್ಲೆಯ ಜಮುನಾಮುಖ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 124/2018 ರ ಅಡಿ ದಾಖಲಾಗಿತ್ತು. ಅಕ್ಟೋಬರ್ 5 ರಂದು ಎನ್ಐಎ ಮರು ನೋಂದಾಯಿಸಿದೆ. NIA ಮಾರ್ಚ್ 11, 2019 ರಂದು ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.