ETV Bharat Karnataka

ಕರ್ನಾಟಕ

karnataka

ETV Bharat / bharat

Live Video- ಮಾತನಾಡುತ್ತಲೇ ಬಾವಿಗೆ ಬಿದ್ದ ಸಹೋದರರು ಸಾವು - Brothers Die After Falling Into Well video

ಬಾವಿಗೆ ಬಿದ್ದು ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಸಂಬಲ್ಪುರದಲ್ಲಿ ಜರುಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಯತಪ್ಪಿ ಬೀಳುವಾಗ ಯುವಕನು ತನ್ನ ಸಹೋದರನನ್ನು ಸಹ ಹಿಡಿದು ಎಳೆದ ಕಾರಣ ಇಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

2-brothers-die-after-falling-into-well-in-odishas-sambalpur-cctv-footage-capture
ಬಾವಿಗೆ ಬಿದ್ದ ಸಹೋದರರು
author img

By

Published : Nov 9, 2021, 12:20 PM IST

ಸಂಬಲ್ಪುರ(ಒಡಿಶಾ): ಸಹೋದರರಿಬ್ಬರು ಬಾವಿಗೆ ಬಿದ್ದು ಮುಳುಗಿ ಸಾವನ್ನಪ್ಪಿರುವ ಘಟನೆ ಸಂಬಲ್ಪುರದ ಲಕ್ಷ್ಮಿ ಟಾಕೀಸ್​ ಬಳಿ ನಡೆದಿದೆ. ಮೃತ ಸಹೋದರರನ್ನು ಸಾಹು ಕಾಲೋನಿಯ ಸುನೀಲ್​ ಮತ್ತು ಸುಶೀಲ್​ ತ್ರಿಪಾಠಿ ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಾವಿಗೆ ಬಿದ್ದು, ಮುಳುಗಿ ಪ್ರಾಣ ಬಿಟ್ಟ ಸಹೋದರರು

ನಿನ್ನೆ ರಾತ್ರಿ ಈ ಸಹೋದರರು ಬಾವಿಯ ಕಟ್ಟೆಯ ಮೇಲೆ ಮಾತನಾಡುತ್ತ ಕುಳಿತಿದ್ದರು. ಈ ಸಂದರ್ಭದಲ್ಲಿ ಓರ್ವ ಆಯ ತಪ್ಪಿ ಬಾವಿಗೆ ಬಿದ್ದಿದ್ದಾನೆ. ಬೀಳುವ ಸಂದರ್ಭದಲ್ಲಿ ಇನ್ನೊಬ್ಬನ್ನು ಹಿಡಿದು ಎಳೆದ ಕಾರಣ ಇಬ್ಬರೂ ಬಾವಿಪಾಲಾಗಿದ್ದಾರೆ. ಆಶ್ಚರ್ಯ ಅಂದ್ರೆ, ಬಾವಿಯ ಪಕ್ಕದಲ್ಲಿ ನಿಂತು ಅವರೊಂದಿಗೆ ಮಾತನಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಅವರನ್ನು ರಕ್ಷಿಸುವ ಗೋಜಿಗೆ ಹೋಗಿಲ್ಲ.

ನಂತರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಸಹೋದರರಿಬ್ಬರು ಮೃತಪಟ್ಟಿದ್ದಾರೆ.

ABOUT THE AUTHOR

...view details