ಚೆನ್ನೈ:ನಿನ್ನೆ ತಡರಾತ್ರಿ ಚೆಂಗಲ್ಪಟ್ಟುವಿನಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಇಂದು ಬೆಳಗ್ಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಏನಿದು ಪ್ರಕರಣ: ಗುರುವಾರ ರಾತ್ರಿ ಮೃತ ಕಾರ್ತಿಕ್ ತನ್ನ ಸ್ನೇಹಿತರನ್ನು ಚಹಾ ಅಂಗಡಿಯಲ್ಲಿ ಭೇಟಿ ಮಾಡಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ, ಬೈಕ್ನಲ್ಲಿ ಮೂವರು ಆತನ ಮೇಲೆ ಕಚ್ಚಾ ಬಾಂಬ್ನಿಂದ ದಾಳಿ ಮಾಡಿದ್ದಾರೆ. ಕಾರ್ತಿಕ್ ಕುಸಿದು ಬಿದ್ದ ಬಳಿಕ ದಾಳಿಕೋರರು ಮಚ್ಚಿನಿಂದ ಮನಸೋ ಇಚ್ಛೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕೊಲೆ ಚೆಂಗಲ್ಪಟ್ಟು ಪೊಲೀಸ್ ಠಾಣೆಯ ಸಮೀಪದಲ್ಲೇ ನಡೆದಿರುವುದು ಗಮನಾರ್ಹ.
ಕೆಲವೇ ನಿಮಿಷಗಳಲ್ಲಿ ಮೆಟ್ಟು ಬೀದಿಯಲ್ಲಿರುವ ತರಕಾರಿ ವ್ಯಾಪಾರಿ ಎಸ್.ಮಹೇಶ್ ಎಂಬುವರ ಮನೆಗೆ ನುಗ್ಗಿದ ತಂಡ, ಮನೆಯಲ್ಲಿ ಟಿವಿ ನೋಡುತ್ತಿದ್ದಾಗಲೇ ಮಹೇಶ್ನನ್ನು ಮಚ್ಚಿನಿಂದ ದಾಳಿ ಮಾಡಿ ಹತ್ಯೆ ಮಾಡಿತ್ತು.