ಕರ್ನಾಟಕ

karnataka

ETV Bharat / bharat

1971ರ ಭಾರತ - ಪಾಕ್​ ಯುದ್ಧ: ಮಾಲ್ಡಾ ತಲುಪಿದ ‘ವಿಜಯ ಜ್ಯೋತಿ’

ಮಾಲ್ಡಾದ ಮುಖ್ಯ ಸೆಕ್ಟರ್​ನಲ್ಲಿ ಗಡಿ ಭದ್ರತಾ ಪಡೆಗಳ ಡೆಪ್ಯೂಟಿ ಇನ್ಸ್​​ಪೆಕ್ಟರ್​ ಜನರಲ್ ಅವರು ಈ ವಿಜಯ ಜ್ಯೋತಿ ಸ್ವಾಗತಿಸಿದ್ದು, ಈ ವೇಳೆ ಆರ್ಮಿ ಬ್ಯಾಂಡ್​​ಗಳು ಹಾಜರಿದ್ದವು.

1971-india-pak-war-victory-flame-reaches-malda
ಮಾಲ್ಡಾ ತಲುಪಿದ ವಿಜಯ ಜ್ಯೋತಿ

By

Published : Apr 20, 2021, 5:56 PM IST

ಮಾಲ್ಡಾ( ಪಶ್ಚಿಮ ಬಂಗಾಳ):1971ರ ಭಾರತ- ಪಾಕ್​ ಯುದ್ಧದ ವಿಜಯ ಸಂಕೇತವಾಗಿ ಸ್ವರ್ನಿಮ್ ವಿಕ್ಟರಿ ಫ್ಲೇಮ್ ಅಥವಾ ವಿಜಯ ಜ್ಯೋತಿ ಮಂಗಳವಾರ ಮಾಲ್ಡಾ ತಲುಪಿದೆ. ಸುಕ್ನಾ ನಗರದಿಂದ ಸ್ಟ್ರೈಕಿಂಗ್ ಲಯನ್ ವಿಭಾಗದ ಅಧಿಕಾರಿಗಳು ಹಾಗೂ ಸೈನಿಕರು ಈ ವಿಜಯ ಜ್ಯೋತಿಯ ಹೊತ್ತು ತಂದಿದ್ದಾರೆ.

ಮಾಲ್ಡಾದ ಮುಖ್ಯ ಸೆಕ್ಟರ್​ನಲ್ಲಿ ಗಡಿ ಭದ್ರತಾ ಪಡೆಗಳ ಡೆಪ್ಯೂಟಿ ಇನ್ಸ್​​ಪೆಕ್ಟರ್​ ಜನರಲ್ ಅವರು ಈ ವಿಜಯ ಜ್ಯೋತಿಯನ್ನು ಸ್ವಾಗತಿಸಿದ್ದು, ಈ ವೇಳೆ ಆರ್ಮಿ ಬ್ಯಾಂಡ್​​ಗಳು ಹಾಜರಿದ್ದವು.

ಮಾಲ್ಡಾದ ಡಿಐಜಿ, ಬಿಎಸ್ಎಫ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ ಜ್ಯೋತಿಗೆ ಗೌರವ ಸಲ್ಲಿಸಿದರು. ವಿಜಯಿ ಓಟದ ಭಾಗವಾಗಿ ಜ್ಯೋತಿಯು ಮಾಲ್ಡಾದಲ್ಲಿ 10 ಕಿಲೋ ಮೀಟರ್ ದೂರ ಮೆರವಣಿಗೆಯಲ್ಲಿ ಸಾಗಿತು. ಇನ್ನೂ ಈ ಜ್ಯೋತಿಯು ನಾಳೆ ಬಲೂರ್​ಘಾಟ್ ತಲುಪಲಿದ್ದು, ವಿಜಯ ಜ್ಯೋತಿ ಆಗಮನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ವರ್ಷ ದೇಶವು 1971ರ ಭಾರತ - ಪಾಕಿಸ್ತಾನ ಯುದ್ಧದ 50ನೇ ವರ್ಷದ ವಿಜಯೋತ್ಸವಾಗಿ ಆಚರಿಸುತ್ತಿದೆ. ಈ ಯುದ್ಧ ಅತಿದೊಡ್ಡ ಮಿಲಿಟರಿ ಶರಣಾಗತಿಯೊಂದಿಗೆ ಕೊನೆಗೊಂಡಿತು, ಪಾಕಿಸ್ತಾನ ಸೇನೆಯ 90,000ಕ್ಕೂ ಹೆಚ್ಚು ಸೈನಿಕರು ಭಾರತಕ್ಕೆ ಶರಣಾಗಿದ್ದರು.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಯುದ್ಧ ಸ್ಮಾರಕದಲ್ಲಿ ಈ ವಿಜಯ ಜ್ಯೋತಿಗೆ ಚಾಲನೆ ನೀಡಿದ್ದರು.

ABOUT THE AUTHOR

...view details