ಕರ್ನಾಟಕ

karnataka

ETV Bharat / bharat

ವರದಕ್ಷಿಣೆ ಕಿರುಕುಳ:19 ವರ್ಷದ ಯುವತಿ ಕೊಲೆ ಮಾಡಿ, ಆತ್ಮಹತ್ಯೆ ನಾಟಕ! - ಉತ್ತರ ಪ್ರದೇಶದಲ್ಲಿ ಯುವತಿ ಕೊಲೆ

ವರದಕ್ಷಿಣೆ ಕಿರುಕುಳ ನೀಡಿರುವ ಗಂಡನ ಕುಟುಂಬಸ್ಥರು 19 ವರ್ಷದ ಯುವತಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

UP Murder
UP Murder

By

Published : Feb 15, 2021, 7:25 PM IST

ಇಟಾ(ಉತ್ತರ ಪ್ರದೇಶ):ವರದಕ್ಷಿಣೆ ಕಿರುಕುಳ ನೀಡಿ, 19 ವರ್ಷದ ಯುವತಿ ಕೊಲೆ ಮಾಡಿರುವ ಗಂಡನ ಕುಟುಂಬದವರು ಇದೊಂದು ಆತ್ಮಹತ್ಯೆ ಎಂದು ನಾಟಕವಾಡಿರುವ ಘಟನೆ ಉತ್ತರ ಪ್ರದೇಶದ ಇಟಾ ನಗರದಲ್ಲಿ ನಡೆದಿದೆ.

ಇಟಾದ ಶಾಸ್ತ್ರಿ ನಗರದಲ್ಲಿ ವಾಸವಾಗಿದ್ದ 19 ವರ್ಷದ ಜಯಾ ಕೊಲೆಯಾಗಿರುವ ದುರ್ದೈವಿ. ಕಳೆದ ಎರಡು ವರ್ಷಗಳ ಹಿಂದೆ ರಾಜೇಶ್​ ಎಂಬ ವ್ಯಕ್ತಿ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಹೆಂಡತಿಗೆ ವರದಕ್ಷಿಣೆ ರೂಪದಲ್ಲಿ ಮೋಟರ್​ ಸೈಕಲ್​, 2 ಲಕ್ಷ ರೂ ಹಾಗೂ ಬಂಗಾರ ತೆಗೆದುಕೊಂಡು ಬರುವಂತೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದರು. ಇದೇ ಆಕ್ರೋಶದಲ್ಲಿ ಆಕೆಯ ಕೊಲೆ ಮಾಡಿದ್ದಾರೆ.

ಓದಿ: ಬೇರೆ ಜಾತಿ ಯುವಕನೊಂದಿಗೆ ಪ್ರೀತಿ: ಮಹಿಳೆ ಜೀವಂತ ಸುಟ್ಟ ಕುಟುಂಬ!

ಜಯಾ ಕೊಲೆ ಮಾಡಿದ ಬಳಿಕ ಆಕೆಯ ತಾಯಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸುಳ್ಳು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಇದೀಗ ಆರೋಪಿಗಳ ಬಂಧನ ಮಾಡಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ABOUT THE AUTHOR

...view details