ಕರ್ನಾಟಕ

karnataka

ETV Bharat / bharat

ಅತಿಯಾದ ಮೊಬೈಲ್​ ಬಳಕೆ: ಸಹೋದರಿಯನ್ನೇ ಕೊಲೆ ಮಾಡಿದ ಒಡಹುಟ್ಟಿದ ಅಣ್ಣ - ಸಹೋದರಿ ಕೊಲೆ ಮಾಡಿದ ಅಣ್ಣ

ಅತಿ ಹೆಚ್ಚು ಮೊಬೈಲ್​ ಮಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಸಹೋದರನೊಬ್ಬ ತಂಗಿಯ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Girl killed by brother
Girl killed by brother

By

Published : Jun 30, 2021, 3:30 PM IST

ತೂತುಕುಡಿ (ತಮಿಳುನಾಡು):ಅತಿಯಾದ ಮೊಬೈಲ್​ ಬಳಕೆ ಮಾಡ್ತಿದ್ದ ಸಹೋದರಿಯನ್ನ ಅಣ್ಣನೊಬ್ಬ ಕೊಲೆ ಮಾಡಿರುವ ಘಟನೆ ತೂತುಕುಡಿಯ ವಾಸವಪ್ಪಪುರಂ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಮಾಡಲಾಗಿದೆ.

17 ವರ್ಷದ ಕವಿತಾ ಹಾಗೂ 20 ವರ್ಷದ ಮಲೈರಾಜ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಕೆಲ ತಿಂಗಳಿಂದ ಕವಿತಾ ಸಹೋದರನ ಮೊಬೈಲ್​​ನಲ್ಲಿ ಫೇಸ್​ಬುಕ್​, ವಾಟ್ಸ್​​​ಆ್ಯಪ್​ ಬಳಕೆ ಮಾಡುತ್ತಿದ್ದಳು. ಜತೆಗೆ ರಾತ್ರಿಯಿಡೀ ಗೇಮ್​ ಆಡುತ್ತಿದ್ದಳು. ಸಹೋದರಿಯ ಈ ವರ್ತನೆಯಿಂದ ಮಲೈರಾಜ ಆಕ್ರೋಶಗೊಂಡಿದ್ದನು.

ಕೊಲೆಯಾದ ಕವಿತಾ

ಹಾಗೂ ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದನು. ಅಣ್ಣನ ಮಾತು ಕೇಳದ ಕವಿತಾ ತನ್ನ ಕೆಲಸ ಮುಂದುವರೆಸಿದ್ದಳು. ನಿನ್ನೆ ಸಂಜೆ ಕೂಡ ಮಲೈರಾಜ್​ ಸಹೋದರಿಗೆ ಎಚ್ಚರಿಕೆ ನೀಡಿದ್ದು, ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಆರೋಪಿ ಮಲೈರಾಜ

ಇದನ್ನೂ ಓದಿರಿ: ಉಸಿರಾಟ ತೊಂದರೆ: ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾದ ನಟ ದಿಲೀಪ್​ ಕುಮಾರ್​

ಕುಪಿತಗೊಂಡಿರುವ ಮಲೈರಾಜ ಕುಡುಗೋಲಿನಿಂದ ಸಹೋದರಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಮುರಪ್ಪನಾಡು ಪೊಲೀಸರು ಬಂದು ಮೃತದೇಹ ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಲೈರಾಜನನ್ನ ಬಂಧನ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details