ಕರ್ನಾಟಕ

karnataka

ETV Bharat / bharat

ಜೋಧ್​ಪುರ: ಉದ್ಯಾನ ಪ್ರದೇಶದಲ್ಲಿ 19 ಕಾಗೆಗಳು ಸಾವು - ಅರಣ್ಯ ಇಲಾಖೆ

18 ಕಾಗೆಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದ್ದು, ಒಂದು ಕಾಗೆಯ ಮೃತದೇಹವನ್ನು ಅರಣ್ಯ ಇಲಾಖೆಗೆ ತನಿಖೆಗೆ ಕಳುಹಿಸಲಾಗಿದೆ.

19-crows-found-dead-in-phalodi-area-of-jodhpur
19-crows-found-dead-in-phalodi-area-of-jodhpur

By

Published : Jan 7, 2021, 7:15 AM IST

ಜೋಧ್​ಪುರ (ರಾಜಸ್ಥಾನ):ಜೋಶಿಯೊ ಉದ್ಯಾನ ಮತ್ತು ಗುಚಿಯ ಉದ್ಯಾನ ಪ್ರದೇಶದಲ್ಲಿ 19 ಕಾಗೆಗಳು ಸತ್ತಿವೆ. ಅಧಿಕಾರಿಗಳ ನಿರ್ದೇಶನದಲ್ಲಿ, 18 ಕಾಗೆಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದ್ದು, ಒಂದು ಕಾಗೆಯ ಮೃತದೇಹವನ್ನು ಜೋಧ್​ಪುರ ಅರಣ್ಯ ಇಲಾಖೆಗೆ ತನಿಖೆಗೆ ಕಳುಹಿಸಲಾಗಿದೆ.

ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಗೆಗಳು ಸತ್ತು ಬಿದ್ದಿರುವ ಕುರಿತು ಮಾಹಿತಿ ಬಂದಿತ್ತು. ಈ ಕುರಿತು ಎಡಿಎಂ ಹಕಮ್ ಖಾನ್ ಮತ್ತು ಎಸ್‌ಡಿಎಂ ಯಶ್ಪಾಲ್ ಅಹುಜಾ ಅವರು ಪಶುವೈದ್ಯ ಡಾ.ಭಾಗೀರಥ್ ಸೋನಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅರಣ್ಯ ಇಲಾಖೆ ರೇಂಜರ್ ಬುಧರಾಮ್ ವಿಷ್ಣೋಯ್ ಮತ್ತು ಘೆವರ್ರಾಮ್ ಕೂಡ ಸ್ಥಳಕ್ಕೆ ತಲುಪಿ ಸಹಕರಿಸಿದರು. ಕೌನ್ಸಿಲರ್ ಸತ್ಯನಾರಾಯಣ ಗುಚಿಯಾ ಸ್ಥಳಕ್ಕೆ ತಲುಪಿ ಜನರನ್ನು ಎಚ್ಚರಿಸಿ ಈ ಬಗ್ಗೆ ಮಾಹಿತಿ ಪಡೆದರು.

ಈ ಪ್ರದೇಶದ ವಿವಿಧ ಸ್ಥಳಗಳಲ್ಲಿ 19 ಕಾಗೆಗಳು ಶವವಾಗಿ ಪತ್ತೆಯಾಗಿವೆ. ಹಕ್ಕಿ ಜ್ವರ ಅಥವಾ ಕಾಗೆಗಳ ಸಾವಿನ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಡಾ. ಭಾಗೀರಥ್ ಸೋನಿ ಹೇಳಿದ್ದಾರೆ. ಪಕ್ಷಿಗಳಿಂದ ಜ್ವರವು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ವಿಶೇಷ ಕಾಳಜಿ ವಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದರು.

ABOUT THE AUTHOR

...view details