ಶ್ರೀಕಾಕುಲಂ(ಆಂಧ್ರಪ್ರದೇಶ): ಬೀದಿ ನಾಯಿಗಳ ದಾಳಿಗೆ 18 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸಾತ್ವಿಕಾ ರಾಂಬಾಬು ಮತ್ತು ರಾಮಲಕ್ಷ್ಮಿ ದಂಪತಿಯ ಎರಡನೇ ಪುತ್ರಿ ಮೃತ ಕಂದಮ್ಮ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮಗು ಹಾಸಿಗೆಯಲ್ಲಿ ಆಟವಾಡುತ್ತಿತ್ತು. ಪೋಷಕರು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಅಲ್ಲದೇ ಮಗುವನ್ನು ಹತ್ತಿರದ ತೋಟಕ್ಕೆ ಎಳೆದೊಯ್ದಿವೆ. ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಸ್ವಲ್ಪ ಸಮಯದ ನಂತರ ಮಗು ಹಾಸಿಗೆಯಲ್ಲಿ ಇರಲಿಲ್ಲ. ಇದರಿಂದ ಆತಂಕಗೊಂಡ ಮಗುವಿನ ತಾಯಿ ನೆರೆಹೊರೆಯಲ್ಲಿ ವಿಚಾರಿಸಿದ್ದಾರೆ. ಆದರೆ ಅವರು ಯಾರೂ ನೋಡಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಮಗುವನ್ನು ಹುಡುಕುತ್ತ ಸಾಗಿದಾಗ ಅಳುವ ಧ್ವನಿ ಕೇಳಿದೆ. ಮನೆಯ ಹತ್ತಿರದ ತೋಟದಲ್ಲಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ನಾಯಿಗಳನ್ನು ಓಡಿಸಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಲ್ಲಿನ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನೂ ಓದಿ:ಹೈದ್ರಾಬಾದ್ನಲ್ಲಿವೆ 5.5 ಲಕ್ಷ ಬೀದಿ ನಾಯಿಗಳು; ಅಧಿಕಾರಿಗಳ ಮಾಹಿತಿ!
ಹೈದರಾಬಾದ್ನಲ್ಲಿವೆ 5.5 ಲಕ್ಷ ಬೀದಿ ನಾಯಿಗಳು: ಕಳೆದ ಫೆ.24ರಂದು ಹೈದರಾಬಾದ್ನ ಅಂಬರ್ಪೇಟ್ ಎಂಬಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದ ಘಟನೆ ವರದಿ ಆದ ಬೆನ್ನಲ್ಲೇ ಒಂದೇ ದಿನ 16 ಜನರ ಮೇಲೆ ದಾಳಿ ಆಗಿರುವುದು ತಿಳಿದು ಬಂದಿತ್ತು. ಈ ನಡುವೆ ಹೈದರಾಬಾದ್ನಲ್ಲಿ 5.5 ಲಕ್ಷ ಬೀದಿ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಅಂಬರ್ಪೇಟ್ನ ಘಟನೆ ಮಾಸುವ ಮೊದಲೇ ಚೈತನ್ಯಪುರಿಯಲ್ಲಿ ನಾಲ್ಕು ವರ್ಷದ ಮತ್ತೊಬ್ಬ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಪೋಷಕರ ಎಚ್ಚರಿಕೆಯಿಂದ ಮಗು ಬದುಕುಳಿದಿತ್ತು. ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ 14 ಮಂದಿ, ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಒಬ್ಬರು, ಖಮ್ಮಂ ಜಿಲ್ಲೆಯಲ್ಲಿ ಬಾಲಕನೊಬ್ಬನ ಮೇಲೆ ಶ್ವಾನಗಳು ದಾಳಿ ನಡೆಸಿದ್ದವು.
ಇದನ್ನೂ ಓದಿ:ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು
ಬಾಲಕನ ಮೇಲೆ ಬೀದಿ ನಾಯಿ ದಾಳಿ:ಇತ್ತೀಚೆಗೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅರಕ್ಕಿನಾರ್ ಎಂಬಲ್ಲಿ ಬೀದಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಯೊಂದು ದಿಢೀರ್ ದಾಳಿ ನಡೆಸಿ ಕೈ ಕಾಲುಗಳಿಗೆ ಕಚ್ಚಿ ಗಾಯ ಮಾಡಿತ್ತು. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಬಾಲಕ ಅಲ್ಲಿಯೇ ಇದ್ದ ಮನೆಯ ಒಳಗೆ ಓಡಿಹೋಗಿದ್ದ.
ಇದನ್ನೂ ಓದಿ:ಬಾಲಕನ ಮೇಲೆ ಬೀದಿ ನಾಯಿ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ