ಕರ್ನಾಟಕ

karnataka

ETV Bharat / bharat

ರೋಮ್‌ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ 173 ಮಂದಿಗೆ ಕೋವಿಡ್ ಸೋಂಕು

ಇಟಲಿಯ ರೋಮ್​ನಿಂದ ಪಂಜಾಬ್​​ನ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ 173 ವಿಮಾನ ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Jan 8, 2022, 8:45 AM IST

ಅಮೃತಸರ(ಪಂಜಾಬ್​):ರೋಮ್‌ನಿಂದ ಶುಕ್ರವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಂತಾರಾಷ್ಟ್ರೀಯ ವಿಮಾನದ 290 ಪ್ರಯಾಣಿಕರಲ್ಲಿ 173 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ರೋಮ್‌ನಿಂದ ವಿಮಾನವೊಂದು ಶುಕ್ರವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವಿಮಾನದಲ್ಲಿ 290 ಪ್ರಯಾಣಿಕರಿದ್ದರು. ಮಕ್ಕಳನ್ನು ಬಿಟ್ಟು 285 ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. 285 ಜನರಲ್ಲಿ 173 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಮೃತಸರ ವಿಮಾನ ನಿಲ್ದಾಣದ ನಿರ್ದೇಶಕ ವಿಕೆ ಸೇಠ್ ಹೇಳಿದ್ದಾರೆ.

ಸೋಂಕಿತ ಪ್ರಯಾಣಿಕರನ್ನು ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿನ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಲು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ.

ಪಾಸಿಟಿವಿಟಿ ದರ 11.75ಕ್ಕೆ ಏರಿಕೆ:

ಪಂಜಾಬ್​ನಲ್ಲಿ ಶುಕ್ರವಾರ 2,901 ಹೊಸ ಕೋವಿಡ್​​-19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,13,976ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಗುರುವಾರ ಶೇ.10.20 ರಿಂದ ಶೆ. 11.75ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,687 ರಿಂದ 9,425 ಕ್ಕೆ ಏರಿಕೆಯಾಗಿದೆ.

831 ಹೊಸ ಪ್ರಕರಣಗಳೊಂದಿಗೆ, ಪಟಿಯಾಲದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳನ್ನು ವರದಿಯಾಗಿವೆ. ರಾಜ್ಯದಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಶೇ.28 ರಷ್ಟಿದೆ. ಇತರ ಜಿಲ್ಲೆಗಳಲ್ಲಿ, ಲುಧಿಯಾನ, ಮೊಹಾಲಿ, ಅಮೃತಸರ ಮತ್ತು ಜಲಂಧರ್ ಕ್ರಮವಾಗಿ 324, 319, 276 ಮತ್ತು 266 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 135 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರಿಗೆ 5,87,888 ಮಂದಿ ಗುಣಮುಖರಾಗಿದ್ದಾರೆ.

ಇದನ್ನೂ ಓದಿ:15-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ​ ಮಾತ್ರ ಸೂಕ್ತ: ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಸೂಚನೆ

ABOUT THE AUTHOR

...view details