ಜಿಂದ್ (ಹರಿಯಾಣ):ಆಮ್ಲಜನಕದ ಸಿಲಿಂಡರ್, ರೆಮ್ಡೆಸಿವಿರ್ ಚುಚ್ಚುಮದ್ದು ಆಯ್ತು, ಇದೀಗ ಕೊರೊನಾ ವ್ಯಾಕ್ಸಿನ್ಗಳು ಕೂಡ ಕಳ್ಳತನವಾಗಿದೆ. ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ 1710 ಡೋಸ್ಗಳನ್ನು ಕಳವು ಮಾಡಲಾಗಿದೆ.
ಆಸ್ಪತ್ರೆಯ ಪಿಪಿಸಿ ಕೇಂದ್ರದಿಂದ 1270 ಕೋವಿಶೀಲ್ಡ್ ಮತ್ತು 440 ಕೋವ್ಯಾಕ್ಸಿನ್ ಡೋಸ್ಗಳು ಹಾಗೂ ಕೆಲವು ಪ್ರಮುಖ ದಾಖಲೆಗಳು ಕಳ್ಳತನವಾಗಿದೆ.