ಎರ್ನಾಕುಲಂ( ಕೇರಳ):17 ವರ್ಷದ ಬಾಲಕಿಯೊಬ್ಬಳು ತನ್ನ ಯಕೃತ್‌ನ ಅರ್ಧ ಭಾಗವನ್ನು ತನ್ನ ಅಸ್ವಸ್ಥ ತಂದೆಗೆ ನೀಡಲು ಅನುಮತಿ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದಾಳೆ. ಬಾಲಕಿ ಪರ ಅರ್ಜಿ ಸಲ್ಲಿಸಿದ ತ್ರಿಶೂರ್ನ ಪಿಪಿ ದೇವಾನಂದ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಬಗ್ಗೆ ಅಭಿಪ್ರಾಯ ತಿಳಿಸಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲರು, ಪ್ರಕರಣದಕ್ಕೆ ಸಂಬಂಧಿಸಿದಂತೆ ನಿರ್ಧಾರ ತಿಳಿಸಲು ಹೆಚ್ಚಿನ ಸಮಯಬೇಕು ಎಂದು ಮನವಿ ಮಾಡಿದರು.
ತೀವ್ರ ಯಕೃತ್‌ನ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂದೆಗೆ ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಲು ಕಾನೂನು ಸಮಸ್ಯೆಗಳ ಹಿನ್ನೆಲೆಯಲ್ಲಿ ಬಾಲಕಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.