ಕರ್ನಾಟಕ

karnataka

ETV Bharat / bharat

ವಿದ್ಯಾಭ್ಯಾಸ ಮಾಡಲು ಹಣವಿಲ್ಲದೇ 17 ವರ್ಷದ ಬಾಲೆ ಆತ್ಮಹತ್ಯೆ?! - ವಿದ್ಯಾರ್ಥಿನಿ ಆತ್ಮಹತ್ಯೆ

ವಿದ್ಯಾಭ್ಯಾಸ ಮಾಡಲು ಹಣವಿಲ್ಲದ ಹಿನ್ನೆಲೆ ಪತ್ರ ಬರೆದಿಟ್ಟು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ.

ಸೇಜಲ್​ ಗೋಪಾಲ್ ಜಾಧವ್
ಸೇಜಲ್​ ಗೋಪಾಲ್ ಜಾಧವ್

By

Published : Oct 22, 2021, 10:56 PM IST

ಅಮರಾವತಿ (ಮಹಾರಾಷ್ಟ್ರ):ವಿದ್ಯಾಭ್ಯಾಸ ಮಾಡಲು ಹಣವಿಲ್ಲದ ಹಿನ್ನೆಲೆ ಪತ್ರ ಬರೆದಿಟ್ಟು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಾವತಿಯ ಕುರ್ಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೇಜಲ್​ ಗೋಪಾಲ್ ಜಾಧವ್ ಮೃತ ದುರ್ದೈವಿ.

ಪತ್ರದಲ್ಲಿ ‘ನಾನು ಹೆತ್ತವರಿಗೆ ಹೊರೆಯಾಗಲು ಬಯಸದ ಕಾರಣ, ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ನನ್ನ ತಂದೆ ಕೃಷಿ ಮಾಡುತ್ತಾರೆ. ಇರುವ ಮೂರು ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷಗಳಿಂದ ಏನೂ ಬೆಳೆ ಬೆಳೆದಿಲ್ಲ. ನಮ್ಮ ಕುಟುಂಬ ಜೀವನ ನಡೆಸಲು ತುಂಬಾ ಕಷ್ಟಪಡುತ್ತಿದೆ. ಇಬ್ಬರು ಸಹೋದರಿಯರು, ಒಬ್ಬ ತಮ್ಮ, ಅಪ್ಪ,-ಅಮ್ಮ ಎಲ್ಲರಿಗೂ ಒಪ್ಪೊತ್ತಿನ ಊಟಕ್ಕೂ ಸಮಸ್ಯೆಯಾಗಿದೆ. ಇಂಥ ಸಮಯದಲ್ಲಿ ಹಣವಿಲ್ಲದೇ ನಾನು ಓದುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಆ ಬಾಲೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ:ಐದು ಮಂದಿ ಅಂತಾರಾಜ್ಯ ಗಾಂಜಾ ಮಾರಾಟಗಾರರ ಬಂಧನ : 50 ಕೆಜಿ ಗಾಂಜಾ ವಶ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು, ಸ್ಥಳದಲ್ಲಿದ್ದ ಪತ್ರ ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಸೇಜಲ್ ಸ್ನೇಹಿತರಿಂದಲೂ ಮಾಹಿತಿ ಪಡೆದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details