ನಾಗ್ಪುರ (ಮಹಾರಾಷ್ಟ್ರ): ಗರ್ಭ ಧರಿಸಿದ್ದನ್ನು ತನ್ನ ಕುಟುಂಬದಿಂದ ಮರೆಮಾಚಲು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಅಪ್ರಾಪ್ತೆ ಗರ್ಭಪಾತ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಾಗ್ಪುರ ಜಿಲ್ಲೆಯ ನಾರ್ಖೇಡ್ ತಾಲೂಕಿನಲ್ಲಿ ಜರುಗಿದೆ.
ಅದೃಷ್ಟವಶಾತ್ ಬಾಲಕಿಯ ಆರೋಗ್ಯ ಸುಧಾರಿಸುತ್ತಿದ್ದು, ಸದ್ಯ ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಾರ್ಖೇಡ್ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದರೂ ನಾಗಪುರದ ಎಂಐಡಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಎಂಐಡಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಏನಿದು ಘಟನೆ? :ಆರು ತಿಂಗಳ ಹಿಂದೆ ಬಾಲಕಿ ತನ್ನ ಪ್ರಿಯಕರನ ಕೋಣೆಗೆ ಬಂದಿದ್ದಳು. ಆ ವೇಳೆ, ಇಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆಯಂತೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಆಕೆ ತನ್ನ ಗೆಳೆಯನಿಗೆ ತಿಳಿಸಿದಾಗ ಆತ ಗರ್ಭಪಾತಕ್ಕೆ ಔಷಧ ಕೊಟ್ಟರೂ ಪ್ರಯೋಜನವಾಗದ ಕಾರಣ ಗಾಬರಿಗೊಂಡ ಬಾಲಕಿ ಯೂಟ್ಯೂಬ್‌ನಲ್ಲಿ ಗರ್ಭಪಾತದ ವಿಡಿಯೋಗಳನ್ನು ನೋಡಲಾರಂಭಿಸಿದ್ದಾಳೆ.