ಕರ್ನಾಟಕ

karnataka

ETV Bharat / bharat

2,500 ರೂ.ಹಿಂದಿರುಗಿಸಿಲ್ಲವೆಂದು ಸ್ನೇಹಿತನನ್ನೇ ಕೊಂದ ಬಾಲಕ - ಅಪ್ರಾಪ್ತ ಬಾಲಕನ ಕೊಲೆ

ಕಲ್ಲಿನಿಂದ ಹೊಡೆದು ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ 17 ವರ್ಷದ ಬಾಲಕನನ್ನು ದೆಹಲಿಯ ಮೈದಾನ್ ಗರ್ಹಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

kill
kill

By

Published : Dec 2, 2020, 3:59 PM IST

ನವದೆಹಲಿ: 2,500 ರೂ.ಗಳನ್ನು ಹಿಂದಿರುಗಿಸಿಲ್ಲ ಎಂದು ತನ್ನ ಸ್ನೇಹಿತನನ್ನೇ 17 ವರ್ಷದ ಬಾಲಕ ದೆಹಲಿಯ ಮೈದಾನ್ ಗರ್ಹಿ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದು, ಆರೋಪಿಯನ್ನು ನಿನ್ನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವನ್ನಪ್ಪಿದ ಅಪ್ರಾಪ್ತ ಬಾಲಕ ಹಾಗೂ ಆರೋಪಿ ಇಬ್ಬರು ಮಾದಕ ವ್ಯಸನಿಗಳಾಗಿದ್ದು, ತನ್ನ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ಬಾಲಕನ ತಂದೆ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 9 ರಂದು ಮೈದಾನ್ ಗರ್ಹಿಯ ಶಂಶನ್ ಘಾಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಶವವೊಂದು ಬಿದ್ದಿದೆ ಎಂದು ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಲಕನ ಅರ್ಧ ಮೃತದೇಹ ಪತ್ತೆಯಾಗಿದ್ದು, ಉಳಿದ ದೇಹವನ್ನು ಪ್ರಾಣಿಗಳು ತಿಂದಿದ್ದವು. ಬಟ್ಟೆ ಮತ್ತು ಹಚ್ಚೆ ಗುರುತಿನ ಆಧಾರದ ಮೇಲೆ ಮೃತ ಬಾಲಕನನ್ನು ಆತನ ಪೋಷಕರು ಗುರುತಿಸಿದ್ದರು. ನಂತರ ಏಮ್ಸ್ ಆಸ್ಪತ್ರೆಗೆ ಶವ ಸ್ಥಳಾಂತರಿಸಲಾಗಿತ್ತು.

ಮೃತ ಬಾಲಕನ ತಲೆಗೆ ಪೆಟ್ಟು ಬಿದ್ದಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಬಂದ ಹಿನ್ನೆಲೆ ಮೈದಾನ್ ಗರ್ಹಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details