ಕರ್ನಾಟಕ

karnataka

ETV Bharat / bharat

ಅಮಾನವೀಯತೆ : 17 ವರ್ಷದ ಬಾಲಕನಿಗೆ ಥಳಿಸಿದ ವಿಡಿಯೋ ವೈರಲ್​! - 17 ವರ್ಷದ ಬಾಲಕನಿಗೆ ಥಳಿಸಿದ ವಿಡಿಯೋ ವೈರಲ್

ಕಳ್ಳತನ ಮಾಡಿರುವ ಆರೋಪದ ಮೇಲೆ 17 ವರ್ಷದ ಬಾಲಕನೋರ್ವನನ್ನ ಮಿಕ್ಸಿಂಗ್ ಮಷಿನ್​ ಗಾಲಿಗೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ..

17 year old boy beaten mumbra
17 year old boy beaten mumbra

By

Published : Jun 6, 2022, 11:44 AM IST

Updated : Jun 6, 2022, 12:14 PM IST

ಥಾಣೆ(ಮಹಾರಾಷ್ಟ್ರ) :ಅಪ್ರಾಪ್ತ ಬಾಲಕನೋರ್ವನಿಗೆಮಿಕ್ಸಿಂಗ್​​ ಮಷಿನ್ ಗಾಲಿಗೆ ಕಟ್ಟಿ ಹಾಕಿ ಅಮಾನವೀಯ ರೀತಿ ಥಳಿಸಿರುವ ಘಟನೆಥಾಣೆಯ ಮುಂಬ್ರಾ ಪ್ರದೇಶದಲ್ಲಿ ನಡೆದಿದೆ. ಈ ಬಾಲಕನ ಮೇಲೆ ನಿರ್ದಯವಾಗಿ ನಡೆಸಿರುವ ಹಲ್ಲೆಯ ಬಗೆಗಿನ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಳೆದ ಮೇ 31ರಂದು ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿ ಕಳ್ಳತನ ನಡೆದಿರುವ ಆರೋಪದ ಮೇಲೆ ಅಲ್ಲಿನ ಸಿಬ್ಬಂದಿ 17 ವರ್ಷದ ಅಪ್ರಾಪ್ತನಿಗೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜೂನ್ 4ರಂದು ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 ವರ್ಷದ ಬಾಲಕನಿಗೆ ಥಳಿಸಿದ ವಿಡಿಯೋ ವೈರಲ್​!

ಇದನ್ನೂ ಓದಿ:ಇಂಗ್ಲೆಂಡ್​ ಗೆಲ್ಲಿಸಿದ ಜೋ ರೂಟ್​ಗೆ ಸಿಕ್ತು ರಾಜ ಮರ್ಯಾದೆ.. ವಿಡಿಯೋ ನೋಡಿ

ಮರಳು-ಸಿಮೆಂಟ್​ ಮಿಶ್ರಣ ಮಾಡುವ ಯಂತ್ರಕ್ಕೆ ಕಟ್ಟಿ ಹಾಕಿ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ವಿಡಿಯೋ ಸೆರೆ ಹಿಡಿದಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಬಾಲಕನ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಲಾಗಿದೆ. ಇದರ ಬೆನ್ನಲ್ಲೇ ಚಿಕಿತ್ಸೆಗೋಸ್ಕರ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಗಾಯಾಳು ಬಾಲಕನನ್ನ ದಾಖಲು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ 5-6 ಮಂದಿ ವಿರುದ್ಧ ಸೆಕ್ಷನ್​ 307,331,342,141,149,504,506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಇಬ್ಬರ ಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೂನ್​ 10ರವರೆಗೆ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Last Updated : Jun 6, 2022, 12:14 PM IST

ABOUT THE AUTHOR

...view details