ಕರ್ನಾಟಕ

karnataka

ETV Bharat / bharat

'ಒಂದು ರಾಷ್ಟ್ರ ಒಂದೇ ರೇಷನ್​ ಕಾರ್ಡ್​': 17 ರಾಜ್ಯಗಳಲ್ಲಿ ಯೋಜನೆ ಕಾರ್ಯಗತ.. ಕರ್ನಾಟಕವೂ ಜಾರಿ ಮಾಡಿದೆಯಾ?

ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳಲ್ಲಿ 'ಒಂದು ರಾಷ್ಟ್ರ ಒಂದು ರೇಷನ್​ ಕಾರ್ಡ್'​ ಯೋಜನೆ ಕಾರ್ಯಗತಗೊಂಡಿದೆ. ವ್ಯಾಪಾರ ಸುಧಾರಣೆಗಳನ್ನು ಸುಲಭಗೊಳಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನ ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಆಂಧ್ರಪ್ರದೇಶದ ಪಾಲಾಗಿದೆ.

One Nation One Ration Card
ಒಂದು ರಾಷ್ಟ್ರ ಒಂದು ರೇಷನ್​ ಕಾರ್ಡ್​

By

Published : Mar 16, 2021, 7:37 AM IST

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಾಗಿರುವ 'ಒಂದು ರಾಷ್ಟ್ರ ಒಂದು ರೇಷನ್​ ಕಾರ್ಡ್​ ಯೋಜನೆ' ದೇಶದ 17 ರಾಜ್ಯಗಳಲ್ಲಿ ಕಾರ್ಯಗತಗೊಂಡಿದೆ.

ಯಾವುದೇ ಫಲಾನುಭವಿ ದೇಶದ ಯಾವುದೇ ಭಾಗದಲ್ಲಿ ರಿಯಾಯಿತಿ ದರದಲ್ಲಿ ರೇಷನ್​ ಪಡೆದು ಜೀವನ ಸಾಗಿಸಬಹುದಾಗಿದೆ. ಆಂಧ್ರಪ್ರದೇಶ, ಗೋವಾ, ಹರಿಯಾಣ, ಕರ್ನಾಟಕ, ಕೇರಳ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಣಿಪುರ, ಒಡಿಶಾ, ಪಂಜಾಬ್​, ರಾಜಸ್ಥಾನ, ಉತ್ತರಾಖಂಡ್​ ರಾಜ್ಯಗಳು ಒಂದು ರಾಷ್ಟ್ರ ಒಂದು ರೇಷನ್​ ಕಾರ್ಡ್​ ವ್ಯವಸ್ಥೆಯನ್ನು ಜಾರಿಗೆ ತಂದಿವೆ.

ಇದನ್ನೂ ಓದಿ: ಕಿಲಿಮಂಜಾರೋ ಪರ್ವತ ಏರಿ ಸಾಧನೆ ಮಾಡಿದ 7 ವರ್ಷದ ಪೋರ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್​​ಎಫ್​ಎಸ್​ಎ) ಅನ್ವಯ ವಲಸಿಗರು ಈಗ ತಾವಿರುವ ಪ್ರದೇಶದಲ್ಲಿ ರೇಷನ್​ ಕಾರ್ಡ್​ ಮೂಲಕ ಪಡಿತರವನ್ನು ಪಡೆಯಬಹುದು. ಇದು ವಲಸಿಗರಿಗೆ ಬಹಳ ಅನುಕೂಲ ಮಾಡಿಕೊಡಲಿದೆ.

ಒಂದು ರಾಷ್ಟ್ರ ಒಂದು ರೇಷನ್​ ಕಾರ್ಡ್​

ಇದೇ ವೇಳೆ, ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಹೊಸ ನೀತಿಯಡಿ ಬೋಗಸ್​ ಹಾಗೂ ಸುಳ್ಳು ದಾಖಲಾತಿ ನೀಡಿ ಕಾರ್ಡ್ ಪಡೆಯುವವರನ್ನ ಪತ್ತೆ ಹಚ್ಚಲು ಮುಂದಾಗಿವೆ. ಈ ಮೂಲಕ ಅವ್ಯವಹಾರ ತಡೆಗಟ್ಟಲು ಕ್ರಮ ಕೈಗೊಂಡಿದೆ. ಮತ್ತೊಂದೆಡೆ, ವ್ಯಾಪಾರ ಸುಧಾರಣೆಗಳನ್ನು ಸುಲಭಗೊಳಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನ ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಆಂಧ್ರಪ್ರದೇಶದ ಪಾಲಾಗಿದೆ. ಅಲ್ಲದೇ ಮುಕ್ತ ಮಾರುಕಟ್ಟೆ ಮೂಲಕ ಹೆಚ್ಚುವರಿಯಾಗಿ 2,525 ಕೋಟಿ ರೂ. ಪಡೆದಿದೆ.

ABOUT THE AUTHOR

...view details