ವಾರಾಣಸಿ/ಉತ್ತರಪ್ರದೇಶ: ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರ್ಫ್ಯೂಮ್ ಬಾಟಲಿಯಲ್ಲಿ 17 ಲಕ್ಷ ಮೌಲ್ಯದ ಚಿನ್ನವನ್ನು ತಂದಿದ್ದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪರ್ಫ್ಯೂಮ್ ಬಾಟಲಿಯಲ್ಲಿ ಚಿನ್ನ ಸಾಗಣೆ: ವಾರಾಣಸಿ ಏರ್ಪೋರ್ಟ್ನಲ್ಲಿ 17 ಲಕ್ಷ ಮೌಲ್ಯದ ಚಿನ್ನ ಸೀಜ್ - ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನ್ಯೂಸ್
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಹಿಳೆಯೊಬ್ಬರು ಫಫ್ಯೂಮ್ ಬಾಟಲಿಯಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದು, ಸುಮಾರು 17 ಲಕ್ಷ ಮೌಲ್ಯದ ಚಿನ್ನಾಭಾರಣವನ್ನ ವಶಪಡಿಸಿಕೊಂಡಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ಬರುತ್ತಿದ್ದ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯು ಶಾರ್ಜಾದಿಂದ ವಾರಾಣಸಿಗೆ ಬಂದ ಮಹಿಳಾ ಪ್ರಯಾಣಿಕರೊಬ್ಬರು ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಕಚ್ಚಾ ಚಿನ್ನವನ್ನು ಸುಗಂಧ ದ್ರವ್ಯದ ಬಾಟಲಿಯಲ್ಲಿ ಮತ್ತು ಮಣಿಗಳಲ್ಲಿ ತುಂಬಿ ಕಳ್ಳಸಾಗಣೆ ಮಾಡುತ್ತಿದ್ದದ್ದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಮಹಿಳೆಯ ಬಳಿ ಇದ್ದ ಐಫೋನ್ ಅನ್ನು ಸಹ ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಈ ಐಫೋನ್ ಬೆಲೆ 74 ಸಾವಿರ. ಬಂಧಿತ ಮಹಿಳೆಯಿಂದ 355.65 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆಲೆ ಸುಮಾರು 17 ಲಕ್ಷ ರೂಪಾಯಿ ಎಂದು ಕಸ್ಟಮ್ಸ್ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.