ಕರ್ನಾಟಕ

karnataka

ETV Bharat / bharat

ಜಸ್ಟ್ 12 ನಿಮಿಷ, 17 ಕೆಜಿ ಚಿನ್ನ, ನಗದು ಲೂಟಿ.. - ರಾಜಸ್ಥಾನದ ಚುರುವಿನಲ್ಲಿ ಕಳ್ಳತನ

ಕಳ್ಳತನ ಮಾಡುವ ಮೊದಲು ಖದೀಮರು ಸಿಸಿಟಿವಿಯ ವೈರ್​ಗಳನ್ನು ಕಟ್ ಮಾಡಿದ್ದಾರೆ. ಬಳಿಕ ಸಿಬ್ಬಂದಿಗೆ ಬೆದರಿಕೆ ಹಾಕಿ ಬಾತ್​ರೂಂನೊಳಗೆ ಕೂಡಿ ಹಾಕಿದ್ದಾರೆ. ಎಫ್​ಎಸ್​ಎಲ್ ತಂಡದಿಂದ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ..

ಜಸ್ಟ್ 12 ನಿಮಿಷಗಳಲ್ಲಿ 17 ಕೆ.ಜಿ. ಚಿನ್ನ ಲೂಟಿ
ಜಸ್ಟ್ 12 ನಿಮಿಷಗಳಲ್ಲಿ 17 ಕೆ.ಜಿ. ಚಿನ್ನ ಲೂಟಿ

By

Published : Jun 14, 2021, 7:26 PM IST

ಚುರು (ರಾಜಸ್ಥಾನ): ಜಿಲ್ಲೆಯ ಮಣಪ್ಪುರಂ ಗೋಲ್ಡ್​ ಶಾಖೆಯಲ್ಲಿ ನಾಲ್ವರು ದುಷ್ಕರ್ಮಿಗಳಿದ್ದ ತಂಡವೊಂದು ಕೇವಲ 12 ನಿಮಿಷಗಳಲ್ಲಿ 17 ಕೆಜಿ ಚಿನ್ನಾಭರಣ ಹಾಗೂ 9 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿದೆ. ಶಾಖೆಯ ಸಿಬ್ಬಂದಿಗೆ ಬೆದರಿಕೆ ಹಾಕಿ ಬಾತ್​ರೂಂನೊಳಗೆ ಕೂಡಿ ಹಾಕಿ ಬಳಿಕ ಖದೀಮರು ಲೂಟಿ ಮಾಡಿದ್ದಾರೆ. ಲೂಟಿಯಾಗಿರುವ ಚಿನ್ನದ ಮೌಲ್ಯ ಅಂದಾಜು ಐದು ಕೋಟಿ ರೂಪಾಯಿಗೂ ಅಧಿಕ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ಕೊಟ್ವಾಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆರೆಹೊರೆಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಎರಡು ಬೈಕ್​ಗಳಲ್ಲಿ ಬಂದ ಗ್ಯಾಂಗ್​​​​ ಮಲಪ್ಪುರಂ ಗೋಲ್ಡ್ ಶಾಖೆಯನ್ನು ಲೂಟಿ ಮಾಡಿದೆ.

ಇದನ್ನೂ ಓದಿ:ಬಂಟ್ವಾಳ: ನನ್ನನ್ನು ಚಿಕ್ಕಪ್ಪನೇ ಅತ್ಯಾಚಾರ ಮಾಡುತ್ತಿದ್ದ, ಯುವತಿ ದೂರು

ಕಳ್ಳತನ ಮಾಡುವ ಮೊದಲು ಖದೀಮರು ಸಿಸಿಟಿವಿಯ ವೈರ್​ಗಳನ್ನು ಕಟ್ ಮಾಡಿದ್ದಾರೆ. ಬಳಿಕ ಸಿಬ್ಬಂದಿಗೆ ಬೆದರಿಕೆ ಹಾಕಿ ಬಾತ್​ರೂಂನೊಳಗೆ ಕೂಡಿ ಹಾಕಿದ್ದಾರೆ. ಎಫ್​ಎಸ್​ಎಲ್ ತಂಡದಿಂದ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details