ಕರ್ನಾಟಕ

karnataka

ETV Bharat / bharat

ಪಿಎಂ ಆವಾಸ್​ ಯೋಜನೆಯಡಿ 17.58 ಲಕ್ಷ ಕುಟುಂಬಗಳಿಗೆ ಸೂರು: ಯೋಗಿ ಆದಿತ್ಯನಾಥ್​ - ಉತ್ತರ ಪ್ರದೇಶ ಸಿಎಂ ಯೋಗಿ ಸುದ್ದಿ

2022ರ ವೇಳೆಗೆ ದೇಶದ ಪ್ರತಿಯೊಂದು ಬಡ ಕುಟುಂಬಕ್ಕೂ ಸೂರು ಒದಗಿಸುವ ಪ್ರಧಾನಿ ಆವಾಸ್ ಯೋಜನೆಗೆ ಉತ್ತರ ಪ್ರದೇಶ ಸರ್ಕಾರ ಕೈಜೋಡಿಸಿದ್ದು, ಬರೋಬ್ಬರಿ 17 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ನಿವಾಸ ಒದಗಿಸುವ ಯೋಜನೆ ಹಾಕಿಕೊಂಡಿದೆ.

UP CM Yogi
UP CM Yogi

By

Published : Jan 1, 2021, 8:06 PM IST

ಲಕ್ನೋ:ಪಿಎಂ ಆವಾಸ್ ಯೋಜನೆಯಡಿ ಯುಪಿಯಲ್ಲಿ ಬರೋಬ್ಬರಿ 17,58,000 ಕುಟುಂಬಗಳಿಗೆ ನಿವಾಸ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ.

ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ಜೆ.ಪಿ.ನಡ್ಡಾ: ಏಮ್ಸ್​ ನಿರ್ದೇಶಕರಿಗೆ ಧನ್ಯವಾದ

ಬಡತರ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 'ಸ್ವಂತ ಮನೆ'( ಅಪ್ನಾ ಘರ್​) ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ 10.58 ಲಕ್ಷ ಮನೆ ನಿರ್ಮಾಣ ಮಾಡಲಾಗಿದ್ದು, ಉಳಿದ ಕುಟುಂಬಗಳಿಗೆ ಶೀಘ್ರದಲ್ಲೇ ನಿವಾಸ ಕಟ್ಟಿಕೊಡಲಾಗುವುದು ಎಂದು ಹೇಳಿದ್ದಾರೆ.

ದೇಶದ ನಾಗರಿಕರಿಗೆ ಗೃಹ ನಿರ್ಮಿಸಿಕೊಡುವುದು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ಹೇಳಿದ್ದು, 2022ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೂರು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಗ್ಲೋಬಲ್​ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್​ ಇಂಡಿಯಾ ಅಡಿಯಲ್ಲಿ ಎಲ್​ಹೆಚ್​​ಪಿ(ಹಗುರ ಮನೆ ಯೋಜನೆ)ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಶಂಕುಸ್ಥಾಪನೆ ನೆರವೇರಿಸಿ ನಮೋ ಮಾತನಾಡಿದರು.

2019ರಲ್ಲಿ ಪ್ರಧಾನಿ ಆವಾಸ್ ಯೋಜನೆ ಸರಿಯಾಗಿ ಬಳಕೆ ಮಾಡಿಕೊಂಡಿದ್ದಕ್ಕಾಗಿ ಉತ್ತರ ಪ್ರದೇಶಕ್ಕೆ ಮೊದಲ ಬಹುಮಾನ ನೀಡಲಾಗಿದೆ.

ABOUT THE AUTHOR

...view details