ಪಾಟ್ನಾ(ಬಿಹಾರ) :ಬಿಹಾರದಲ್ಲಿ ಮದ್ಯ ನಿಷೇಧಿಸಿದ್ದರೂ ಔರಂಗಾಬಾದ್‌ನಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದೆ. ಕಳೆದ 4 ದಿನದಲ್ಲಿ 17 ಜನರು ನಕಲಿ ಮದ್ಯ ಸೇವನೆಗೆ ಬಲಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಪಿಎಸ್ಐ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಔರಂಗಾಬಾದ್‌ನಲ್ಲಿ ಮೂವರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಇದಾದ ಮಾರನೇ ದಿನವೇ ಸಾವಿನ ಸಂಖ್ಯೆ 17ಕ್ಕೇರಿದೆ. ಇದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಉಂಟು ಮಾಡಿದೆ.
ಕಳೆದ ನಾಲ್ಕು ದಿನಗಳಲ್ಲಿ ಔರಂಗಾಬಾದ್‌ನಲ್ಲಿ ಮೂವರು, ಮಾಧೇಪುರದಲ್ಲಿ ಇಬ್ಬರು, ಗಯಾದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಕೆಲ ಮೃತರ ಸಂಬಂಧಿಕರು ಒಪ್ಪಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸಾವಿನ ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ನಕಲಿ ಮದ್ಯದ ಸಾವು ಗೊತ್ತಾಗಿದೆ. ಇದಾದ ಬಳಿಕ ಮದ್ಯ ಮಾರಾಟದ ವಿರುದ್ಧ ಪೊಲೀಸರು ದಾಳಿಯನ್ನು ತೀವ್ರಗೊಳಿಸಿದ್ದಾರೆ.